ಲೈಂಗಿಕ ಕ್ರಿಯೆ ಹೆಚ್ಚಿಸುವ ಔಷಧಗಳ ಬಳಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಮಾನ್ಯವಾಗಿದೆ. ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ 40 – 60 ವರ್ಷ ವಯಸ್ಸಿನ ಸುಮಾರು ಶೇ 52 ಜನರು ಲೈಂಗಿಕ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಶಕ್ತಿ ಮತ್ತು ತಮ್ಮ ಲೈಂಗಿಕ ಕ್ರಿಯೆಯನ್ನು ಅನಿಯಂತ್ರಿತವಾಗಿ ಹೆಚ್ಚಿಸಲು ಔಷಧಗಳನ್ನು ಬಳಸುತ್ತಾರೆ.
ಸಾಮಾನ್ಯವಾಗಿ ಜನರು ಯಾವುದೇ ತಜ್ಞರ ಸಲಹೆಯಿಲ್ಲದೇ ಇಂತಹ ಔಷಧಗಳನ್ನು ಬಳಸುವುದರಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಾರೆ. ನಿಮಿರು ದೌರ್ಬಲ್ಯ ಸಮಸ್ಯೆಗೆ ವಯಾಗ್ರವು ತಾತ್ಕಾಲಿಕ ಪರಿಹಾರವಾಗಿದೆ. ಆದರೆ ಕೆಲವರು ಇದನ್ನು ನಿಯಮಿತವಾಗಿ ಸೇವನೆ ಮಾಡುವರು ಮತ್ತು ಅದರಿಂದ ದೀರ್ಘಾವಧಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಹೃದಯಾಘಾತ
ವಯಾಗ್ರವನ್ನು ಅತಿಯಾಗಿ ಅಥವಾ ನಿರಂತರವಾಗಿ ಬಳಕೆ ಮಾಡಿದರೆ, ಅದರಿಂದ ಪುರುಷರಲ್ಲಿ ಹೃದಯಾಘಾತದ ಸಮಸ್ಯೆಯು ಕಾಡುವುದು. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳು ಇರುವವರಲ್ಲಿ ಇದು ಕಂಡುಬರಬಹುದು.
ಕೆಲವು ಸಲ ಯಾವುದೇ ಹೃದಯದ ಕಾಯಿಲೆಗಳು ಇಲ್ಲದೆ ಇರುವಾಗಲೂ ಇದು ಕಂಡುಬರುವುದು. ವಯಾಗ್ರ ಸೇವನೆ ಮಾಡಿದ ಬಳಿಕ ಎದೆನೋವು ಕಾಣಿಸುತ್ತಲಿದ್ದರೆ, ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ವಯಾಗ್ರ ಸೇವನೆ ಮಾಡಿದರೆ ಅದರಿಂದ ಹೃದಯಬಡಿತ ಹೆಚ್ಚಾಗಬಹುದು ಮತ್ತು ಹೃದಯಾಘಾತವು ಆಗಬಹುದು.
ತಲೆನೋವು
ವಯಾಗ್ರ ಸೇವನೆಯಿಂದಾಗಿ ಆಗುವ ಕೆಲವೊಂದು ಸಾಮಾನ್ಯ ಸಮಸ್ಯೆಯೆಂದರೆ ಅದು ತಲೆನೋವು ಮತ್ತು ಬಳಲಿಕೆ. ದೇಹದಲ್ಲಿ ಕೆಲವೊಂದು ರಕ್ತನಾಳಗಳನ್ನು ಹಿಗ್ಗಿಸುವ ಪರಿಣಾಮವಾಗಿ ಹೀಗೆ ಆಗುವುದು.
ಇದು ಸ್ವಲ್ಪ ಸಮಯದ ಬಳಿಕ ದೂರವಾದರೂ ಅದರಿಂದ ಅಹಿತಕರ ಮತ್ತು ಸಮಸ್ಯೆಯು ಆಗಬಹುದು. ಇಂತಹ ವೇಳೆ ವೈದ್ಯರ ನೆರವು ಪಡೆಯುವುದು ಅಗತ್ಯ. ಸರಿಯಾದ ಪ್ರಮಾಣದಲ್ಲಿ ವಯಾಗ್ರ ಸೇವನೆ ಮಾಡಿದರೆ, ಅದು ತುಂಬಾ ಒಳ್ಳೆಯದು.
ಪ್ರಿಯಾಪಿಸಂ
ವಯಾಗ್ರ ಸೇವನೆಯಿಂದಾಗಿ ನಿಮಿರು ದೌರ್ಬಲ್ಯ ಸಮಸ್ಯೆಯು ಕೆಡುವುದು ಅಥವಾ ಹೊಸದಾಗಿ ಕಾಣಿಸಿಕೊಳ್ಳುವುದು. ಕೆಲವೊಂದು ಸಂದರ್ಭದಲ್ಲಿ ಪ್ರಿಯಾಪಿಸಂ ತುಂಬಾ ದೀರ್ಘಕಾಲ ಮತ್ತು ನೋವಿನಿಂದ ಕೂಡಿರುವುದು.
ಇಂತಹ ಪರಿಸ್ಥಿತಿಗೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು. ವಯಾಗ್ರ ಸೇವನೆ ಬಳಿಕ ನಾಲ್ಕು ಗಂಟೆಗೂ ಹೆಚ್ಚು ಕಾಲ ನಿಮಿರುವಿಕೆಯು ಇದ್ದರೆ ಆಗ ವೈದ್ಯರನ್ನು ಕೂಡಲೇ ಭೇಟಿ ಮಾಡಿ.
ಕಿವಿ ಕೇಳದೆ ಇರುವುದು
ವಯಾಗ್ರ ಸೇವನೆಯು ಅತಿಯಾದರೆ, ಅದರಿಂದ ಕಿವಿ ಕೇಳದೆ ಇರಬಹುದು. ನಿಯಮಿತವಾಗಿ ವಯಾಗ್ರ ಸೇವನೆ ಮಾಡಿದರೆ, ಅದು ಕಿವಿಗಳ ಅಂಗಾಂಗಗಳಿಗೆ ಹಾನಿ ಉಂಟು ಮಾಡಬಹುದು. ಇದು ತಕ್ಷಣವೇ ಸಂಭವಿಸಬಹುದು ಅಥವಾ ದೀರ್ಘಕಾಲ ಸೇವನೆಯಿಂದಾಗಿ ಹೀಗೆ ಆಗಬಹುದು. ಕಿವಿಯಲ್ಲಿ ಗಂಟೆ ಬಡಿದಂತೆ ಆಗುವುದು ಇದರ ಒಂದು ಲಕ್ಷಣವಾಗಿದೆ.
ದೃಷ್ಟಿ ಕಳೆದುಕೊಳ್ಳುವುದು
ಕೆಲವರಿಗೆ ವಯಾಗ್ರ ಸೇವನೆಯಿಂದಾಗಿ ಹಠಾತ್ ಆಗಿ ದೃಷ್ಟಿಯು ಮಂದವಾಗಬಹುದು ಅಥವಾ ದೃಷ್ಟಿಯು ಕಾಣದ ರಬಹುದು. ಇದು ಕಣ್ಣುಗಳ ನರಗಳಿಗೆ ಹಾನಿ ಉಂಟು ಮಾಡಬಹುದು. ಅತಿಯಾಗಿ ವಯಾಗ್ರ ಸೇವಿಸಿದರೆ ಹೀಗೆ ಆಗುವುದು.
ರಕ್ತದೊತ್ತಡ ತಗ್ಗುವುದು
ವಯಾಗ್ರ ಸೇವನೆ ಬಳಿಕ ಸ್ವಲ್ಪ ರಕ್ತದೊತ್ತಡವು ತಗ್ಗುವುದು ಸಾಮಾನ್ಯ. ಆದರೆ ಹಠಾತ್ ಆಗಿ ರಕ್ತದೊತ್ತಡವು ಕಡಿಮೆಯಾದರೆ, ನೀವು ಹೃದಯ ರೋಗಿಯಾಗಿದ್ದರೆ ತಕ್ಷಣವೇ ವೈದ್ಯರ ಬಳಿಗೆ ಹೋಗಿ. ಕೆಲವೊಂದು ವಯಾಗ್ರ ಮಾತ್ರೆಗಳು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸಬಹುದು.
ವಾಕರಿಕೆ
ವಾಕರಿಕೆ ಎನ್ನುವುದು ವಾಂತಿ ಮಾಡಬೇಕೆಂಬ ಬಯಕೆ ಕಾಡುವುದು. ವಾಕರಿಕೆಯು ತೀವ್ರವಾಗಿ ಇರಬಹುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಇರಬಹುದು. ವಾಕರಿಕೆ ಅಥವಾ ವಾಂತಿಯು ದೈಹಿಕ ಅಥವಾ ಮಾನಸಿಕ ಸಮಸ್ಯೆಯು ಆಗಬಹುದು. ಇದು ಮೆದುಳು ಅಥವಾ ಅನ್ನನಾಳ, ಹೊಟ್ಟೆ, ಸಣ್ಣ ಕರುಳು, ಯಕೃತ್, ಮೇಧೋಗ್ರಂಥಿ ಸಮಸ್ಯೆಯಾಗಿರಬಹುದು.