WhatsApp ವಿಶ್ವದ ಅತ್ಯಂತ ಜನಪ್ರೀಯ ಮತ್ತು ಅತ್ಯುತ್ತಮ ಚಾಟ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಈ ವೇದಿಕೆಯು ಬಳಕೆದಾರರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದರೆ ಇನ್ನೂ ಅನೇಕ ಬಳಕೆದಾರರು ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಒಂದು WhatsApp ಖಾತೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ದೂರುತ್ತಿದ್ದಾರೆ. ಅಧಿಕೃತವಾಗಿ ಇದುವರೆಗೆ ಅಂತಹ ಯಾವುದೇ ವೈಶಿಷ್ಟ್ಯ ವಾಟ್ಸ್ ಆಪ್ ಬಿಡುಗಡೆ ಮಾಡಿಲ್ಲ. ಆದರೆ ಇದೀಗ WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸಮಾಡುತ್ತಿದ್ದು, ಈ ವೈಶಿಷ್ಟ್ಯದಿಂದ ನೀವು ನಿಮ್ಮ ಒಂದೇ ಖಾತೆಯನ್ನು ಏಕಕಾಲದಲ್ಲಿ ಎರಡು ಸ್ಮಾರ್ಟ್ಫೋನ್ಗಳಲ್ಲಿ ಬಳಸಲು ಅನುವು ಮಾಡಿಕೊಡಲಿದೆ. ಈ ವೈಶಿಷ್ಟ್ಯದ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿ ನೋಡಿ
!
ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದೆ.ನ್ಯೂ ಇಯರ್ ನಿಂದ ಕೆಲವು ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಇರುವುದಿಲ್ಲ ಎನ್ನಲಾಗಿದೆ.
Siddaramaiah: ನಕ್ಸಲೀಯರು ಮುಖ್ಯವಾಹಿನಿಗೆ ಬರಬೇಕು: ಸಿಎಂ ಸಿದ್ದರಾಮಯ್ಯ!
ಜನವರಿ 1ನೇ ತಾರೀಖು, ಹೊಸ ವರ್ಷದ ಮೊದಲ ದಿನದಿಂದಲೇ ಪ್ರಮುಖ ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ವಾಟ್ಸಾಪ್ ಮಾಯವಾಗಲಿದೆ. ಇಂತಹ ಒಂದು ವರದಿಯನ್ನು ಹೆಚ್ಡಿ ಬ್ಲಾಗ್ ಡಿಸೆಂಬರ್ 20 ರಂದು ಪ್ರಕಟಿಸಿದೆ
ಆ್ಯಂಡ್ರಾಯ್ಡ್ ಕಿಟ್ಕಾಟ್ ಡಿವೈಸ್ ನ್ನು ಇಂದಿಗೂ ಉಪಯೋಗಿಸುತ್ತಿರುವ,ಮುಂಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ಗಳಲ್ಲಿ ವಾಟ್ಸಾಪ್ ಆ್ಯಕ್ಸಿಸ್ ಆಗುವುದಿಲ್ಲ ಎಂದು ಹೇಳಲಾಗಿದೆ. ವಾಟ್ಸಾಪ್ ಜೊತೆ ಜೊತೆಗೆ ಮೆಟಾ ಆ್ಯಪ್ಗಳಾದಂತಹ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ಗಳು ಕೂಡ ಕಣ್ಮರೆಯಾಗಲಿವೆ.
ಕನಿಷ್ಟ 10 ವರ್ಷಗಳ ಹಿಂದಿನಷ್ಟು ಹಳೆಯದಾದ ಮೊಬೈಲ್ಗಳು ತಮ್ಮ ವಾಟ್ಸಾಪ್ ಆ್ಯಕ್ಸಿಸ್ಗಳನ್ನು ಕಳೆದುಕೊಳ್ಳಲಿವೆ. ಒಂದು ವೇಳೆ ನೀವು 5 ರಿಂದ 6 ವರ್ಷದಷ್ಟು ಹಳೆಯ ಮೊಬೈಲ್ ಯೂಸ್ ಮಾಡುತ್ತಿದ್ದರೆ ಅದರಲ್ಲಿ ವಾಟ್ಸಾಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಒಂದು ವೇಳೆ ಕೆಳಗೆ ನೀಡಿರುವ ಪಟ್ಟಿಗಳಲ್ಲಿ ನಿಮ್ಮ ಮೊಬೈಲ್ ಇದ್ದರೆ ಕೂಡಲೇ ವಾಟ್ಸಾಪ್ ಚಾಟ್ಗಳನ್ನು ಎಕ್ಪೋರ್ಟ್ ಮಾಡಿಕೊಳ್ಳುವುದು ಉತ್ತಮ.
ಈ ಕೆಳಗಂಡ ಮೊಬೈಲ್ಗಳಲ್ಲಿ ಜನವರಿ 1 ರಿಂದ ವಾಟ್ಸಾಪ್ ಆಕ್ಸಿಸ್ ಇರುವುದಿಲ್ಲ
Samsung Galaxy S3, Samsung Galaxy Note 2 Samsung Galaxy Ace 3, Samsung Galaxy S4 Mini, Moto G (1st Gen),Motorola Razr HD, Moto E 2014,HTC One X,HTC One X+,HTC Desire 500,HTC Desire 601, HTC Optimus G, HTC Nexus 4, LG G2 Mini, LG L90, Sony Xperia Z,Sony Xperia SP, Sony Xperia T, Sony Xperia V