ಮಹಿಳೆಯರನ್ನು ಮನೆಯ ಮಹಾಲಕ್ಷ್ಮೀ ಎನ್ನಲಾಗುತ್ತದೆ. ಮನೆಯನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಆಕೆಗಿದೆ. ಮಹಿಳೆಯಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಹಾಗೆಯೇ ಮಹಿಳೆ ಮಾಡುವ ಕೆಲ ತಪ್ಪುಗಳು ಸಹ ಮನೆಯನ್ನು ಹಾಳು ಮಾಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಮಹಿಳೆಯರು ಯಾವ ತಪ್ಪು ಮಾಡಬಾರದು ಎಂಬುದು ಇಲ್ಲಿದೆ.
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆಯೇ ಎಂಟ್ರಿ ಕೊಟ್ಟ ಮಳೆ: ವಾಹನ ಸವಾರರು ಹೈರಾಣು!
ಬೆಳಿಗ್ಗೆ ಮಹಿಳೆ ಕೆಲವೊಂದು ಕೆಲಸ ಗಳನ್ನು ಅಪ್ಪಿತಪ್ಪಿಯೂ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದನ್ನು ಮಾಡಿದ್ರೆ ಧನ ಹಾನಿಯಾಗುತ್ತದೆ. ದೇವರ ಆಶೀರ್ವಾದ ಸಿಗುವುದಿಲ್ಲ. ನಾವಿಂದು ಮಹಿಳೆ ಬೆಳಿಗ್ಗೆ ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.
ಗಲಾಟೆ – ಜಗಳ : ಶಾಂತ ವಾತಾವರಣದಲ್ಲಿ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ ಎಂಬ ನಂಬಿಕೆಯಿದೆ. ಬೆಳಿಗ್ಗೆ ಯಾವಾಗ್ಲೂ ಮನೆ ಶಾಂತವಾಗಿರಬೇಕು. ಮನೆಯಲ್ಲಿ ಮಹಿಳೆಯ ಲವಲವಿಕೆ ಇರಬೇಕು. ಆದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ಗಂಟಿಕ್ಕಿಕೊಂಡು ಗಲಾಟೆ ಶುರು ಮಾಡಿದ್ರೆ ಎಂದಿಗೂ ಮನೆಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಮನೆಯಲ್ಲಿ ಧನಾಗಮನವಾಗ್ಬೇಕು ಅಂದ್ರೆ ಬೆಳಿಗ್ಗೆ ಮಹಿಳೆ ಯಾವುದೇ ರೀತಿಯ ಗಲಾಟೆ – ಜಗಳವನ್ನು ಮಾಡಬಾರದು. ಇದ್ರಿಂದ ಮನೆಗೆ ದೇವರ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.
ನಿದ್ರೆ ಸಮಯ: ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು, ಮನೆ ಮುಂದೆ ನೀರು ಹಾಕಿ ಕ್ಲೀನ್ ಮಾಡಬೇಕೆಂಬ ಪದ್ಧತಿ ನಮ್ಮಲ್ಲಿದೆ. ಮಹಿಳೆಯಾದವಳು ಬೆಳಿಗ್ಗೆ ಬೇಗ ಏಳಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಸೂರ್ಯ ನೆತ್ತಿಗೆ ಬಂದ್ರೂ ಹಾಸಿಗೆ ಬಿಟ್ಟು ಏಳದೆ ಹೋದ್ರೆ ದರಿದ್ರ ಆವರಿಸುತ್ತದೆ. ಲಕ್ಷ್ಮಿ ಮುನಿಸಿಕೊಂಡು ಮನೆಯಿಂದ ಹೊರಗೆ ಹೋಗ್ತಾಳೆ. ಇದ್ರ ಜೊತೆ ಆರೋಗ್ಯ ಕೂಡ ಹದಗೆಡುತ್ತದೆ. ವಾಸ್ತುವವಾಗಿ ಪುರುಷರಿಗಿಂತ ಮೊದಲು ಮಹಿಳೆ ಏಳಬೇಕು. ಯಾಕೆಂದ್ರೆ ಪುರುಷರಿಗಿಂತ ಹೆಚ್ಚು ಕೆಲಸ ಮಹಿಳೆಯರಿಗಿರುತ್ತದೆ.
ಅದೃಷ್ಟದ ಬಗ್ಗೆ ಮಾತನಾಡ್ಬೇಡಿ : ಎಲ್ಲ ಸೌಕರ್ಯವಿದ್ರೂ ಅದೃಷ್ಟ ಸರಿಯಿಲ್ಲ ಎಂದು ಅನೇಕರು ಆಗಾಗ ಹೇಳ್ತಿರುತ್ತಾರೆ. ತಾಯಿ ಲಕ್ಷ್ಮಿ ಎಲ್ಲ ಸೌಲಭ್ಯ ನೀಡಿದ್ರೂ ಮನಸ್ಸಿನಲ್ಲಿ ಅದು ಬೇಕು, ಇದು ಬೇಕು ಎಂದು ಮಹಿಳೆ ಕೊರಗುತ್ತಿರುತ್ತಾಳೆ. ಇದ್ರಿಂದ ಲಕ್ಷ್ಮಿ ಮತ್ತಷ್ಟು ಕೋಪಗೊಳ್ತಾಳೆ. ಹಾಗೆ ಆಗಬಾರದು ಅಂದ್ರೆ ಅದೃಷ್ಟವನ್ನು ಶಪಿಸಬಾರದು. ಇರುವುದ್ರಲ್ಲಿಯೇ ಸಂತೋಷವಾಗಿದ್ದರೆ ಸಂಪತ್ತು ತಾನಾಗಿಯೇ ಬರುತ್ತದೆ. ಮಹಿಳೆ ಮಾತ್ರವಲ್ಲ ಪುರುಷ ಕೂಡ ಬೆಳಿಗ್ಗೆ ಎದ್ದ ತಕ್ಷಣ ಅದೃಷ್ಟದ ಬಗ್ಗೆ ಮಾತನಾಡಬಾರದು.
ಮನೆಯ ಸ್ವಚ್ಛತೆ : ಮೊದಲೇ ಹೇಳಿದಂತೆ ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸಬೇಕು. ಮನೆಯ ಮೂಲೆ ಮೂಲೆ ಕ್ಲೀನ್ ಆಗಿರಬೇಕು. ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮಿ ಖುಷಿಯಾಗ್ತಾಳೆ. ಕೊಳಕಾದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮಹಿಳೆ ಮನೆಯನ್ನು ಸ್ವಚ್ಛಗೊಳಿಸಬೇಕು.
ಅಡುಗೆ ಮನೆಯನ್ನು ಹೀಗೆ ಬಳಸಿ : ಬೆಳಿಗ್ಗೆ ಅನೇಕ ಮಹಿಳೆಯರು ಮುಖ ತೊಳೆಯದೆ ಅಡುಗೆ ಮನೆಗೆ ಪ್ರವೇಶಿಸ್ತಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಇದು ತಪ್ಪು. ಅಡುಗೆ ಮನೆಯಲ್ಲಿ ಅನ್ನಪೂರ್ಣೆ ಹಾಗೂ ಲಕ್ಷ್ಮಿ ನೆಲೆಸಿರುತ್ತಾರೆ. ಹಾಗಾಗಿ ಸ್ನಾನ ಮಾಡಿಯೇ ಅಡುಗೆ ಮನೆಗೆ ಹೋಗಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.
ಬೆಳಗ್ಗೆ ಈ ಕೆಲಸ ಮಾಡಬೇಡಿ : ಮನೆಯ ಹೊಸ್ತಿಲು ಪವಿತ್ರವಾದ ಸ್ಥಳ. ಮಹಿಳೆ ಬೆಳಿಗ್ಗೆ ಎದ್ದ ತಕ್ಷಣ ಅದನ್ನು ತುಳಿಯಬಾರದು. ಅದ್ರ ಮೇಲೆ ಕುಳಿತು ಉಪಹಾರ ಸೇವನೆ ಮಾಡಬಾರದು.