ಗರ್ಭಿಣಿ ಮಹಿಳೆಯರ ಆಹಾರ ಪದ್ಧತಿ ತುಂಬಾ ಆರೋಗ್ಯಕರವಾಗಿರುತ್ತದೆ. ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡುವ ಕೆಲವೊಂದು ಆಹಾರಗಳು ಗರ್ಭಿಣಿ ಮಹಿಳೆಗೆ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಒದಗಿಸುತ್ತದೆ.
ಬಾದಾಮಿ ಬೀಜಗಳು:
ಗರ್ಭಿಣಿ ಮಹಿಳೆಯರು ಪ್ರತಿದಿನ ಒಂದು ಹಿಡಿ ನೆನೆಸಿದ ಬಾದಾಮಿ ಬೀಜಗಳನ್ನು ಸೇವನೆ ಮಾಡಬೇಕು. ಬಾದಾಮಿ ಬೀಜಗಳು ಪ್ರತಿಯೊಬ್ಬರ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಗರ್ಭಿಣಿ ಮಹಿಳೆಯರ ದೇಹದ ಆರೋಗ್ಯದ ಮೇಲೆ ಇವುಗಳ ಪ್ರಭಾವ ತುಂಬಾ ಹೆಚ್ಚಾಗಿರುತ್ತದೆ.
ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿಗೆ ಅಲರ್ಜಿ ಸಮಸ್ಯೆ ಉಂಟಾಗುವ ಸಾಧ್ಯತೆ ತಪ್ಪುತ್ತದೆ. ಗರ್ಭಿಣಿ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಬಾದಾಮಿ ಬೀಜಗಳು ಕೆಲಸ ಮಾಡುತ್ತವೆ.
ಪಿಸ್ತಾ ಬೀಜಗಳು
ಪಿಸ್ತ ಬೀಜಗಳಲ್ಲಿ ಪ್ರೋಟೀನ್ ಅಂಶ, ಫೈಬರ್ ಅಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.
ಇವುಗಳಲ್ಲಿ ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರಿಗೆ ಇದು ಹೆಚ್ಚು ಸೂಕ್ತ ಎಂದು ಹೇಳಬಹುದು.
ವಾಲ್ನಟ್ ಬೀಜಗಳು
ವಿಶೇಷ ಬಗೆಯ ಪೌಷ್ಠಿಕಾಂಶಗಳನ್ನು ಮತ್ತು ಆರೋಗ್ಯದ ಪ್ರಯೋಜನಗಳನ್ನು ಒಳಗೊಂಡಿರುವ ವಾಲ್ನಟ್ ಬೀಜಗಳು ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಹೆಚ್ಚು ಪ್ರಯೋಜಕ ಎಂದು ಹೇಳಬಹುದು.
ಗರ್ಭಾವಸ್ಥೆಯಲ್ಲಿ ವಾಲ್ನಟ್ ಬೀಜಗಳನ್ನು ಸೇವನೆ ಮಾಡುವುದರಿಂದ ಮಗುವಿನ ಮೆದುಳಿನ ಕಾರ್ಯ ಚಟುವಟಿಕೆ ಅಭಿವೃದ್ಧಿಯಾಗಲಿದೆ. ಹುಟ್ಟಿದ ನಂತರ ಇದು ನೆನಪಿನ ಶಕ್ತಿ ಮತ್ತು ಗಮನವನ್ನು ಕೇಂದ್ರೀಕರಿಸುವ ಶಕ್ತಿಯನ್ನು ಮಗುವಿನಲ್ಲಿ ಹೆಚ್ಚು ಮಾಡುತ್ತದೆ. ಆದರೆ ಯಾವಾಗಲೂ ವಾಲ್ನಟ್ ತಿನ್ನುವ ಅಭ್ಯಾಸ ಬೇಡ.