ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಶೇಕಡಾ 3.75ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಆದೇಶಿಸಲಾಗಿದೆ. ಅದಲ್ಲದೆ ಈಗಾಗಲೇ ಹೊಸ ಆದೇಶದಂತೆ 30 ವರ್ಷ ಸರ್ಕಾರಿ ಸೇವೆ ಮಾಡಿದ ನೌಕರರಿಗೂ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಸೌಲಭ್ಯ ಸಿಗಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ವಯಸ್ಸಾದ ಕಾಲದಲ್ಲಿ ಅನುಕೂಲವಾಗುವಂತೆ ಸರ್ಕಾರ ಹಣವನ್ನು ನೀಡಲಾಗುತ್ತದೆ. ಇನ್ನೂ ನಿವೃತ್ತಿ ವೇತನ ಅರ್ಜಿ ಸಲ್ಲಿಸ ಬೇಕೆಂದರೆ ಈ ದಾಖಲಾತಿಗಳು ಕಡ್ಡಾಯವಾಗಿರುತ್ತದೆ. ಮೊದಲು ನಿವೃತ್ತಿ ವೇತನದ ಮಂಜೂರಾತಿಗೆ ಅರ್ಜಿಯನ್ನು ಸಲ್ಲಿಸಬೇಕು ( ಅರ್ಜಿಯ ನಮೂನೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ)
ಕಛೇರಿ ಮುಖ್ಯಸ್ಥರು ನಿವೃತ್ತನಾಗಲಿರುವ ನೌಕರನಿಂದ ಪಡೆಯಬೇಕಾದ ದಾಖಲೆಗಳು ಈ ಕೆಳಕಂಡಂತಿವೆ
- ಸರ್ಕಾರಿ ನೌಕರನ ಹೆಸರು
- ಹುಟ್ಟಿದ ತಾರೀಖು
- ನಿವೃತ್ತಿ ತಾರೀಖು
- ಮಾದರಿ ಸಹಿಯನ್ನು ಒಳಗೊಂಡ ಎರಡು ಚೀಟಿಗಳು
- ಗಂಡ – ಹೆಂಡತಿಯ ಜೊತೆಗೆ ಒಟ್ಟಿಗೆ ತೆಗೆಸಿಕೊಂಡ ಪಾಸ್ ಪೋರ್ಟ್ ಅಳತೆಯ ಜಂಟಿ ಭಾವಚಿತ್ರದ ಮೂರು ಪ್ರತಿಗಳು
- ಎತ್ತರ ಹಾಗೂ ಗುರುತಿಸಲು ಅನುಕೂಲವಾಗುವಂತಹ ಸ್ಪಷ್ಟ ಗುರುತು ಚಿಹ್ನೆಗಳನ್ನು ನಮೂದಿಸಿರುವ ಎರಡು ಚೀಟಿಗಳು
- ಖಾಯಂ ವಿಳಾಸ
- ನಿವೃತ್ತಿ ನಂತರದ ವಿಳಾಸ ನಿವೃತ್ತಿ ವೇತನವನ್ನು ಪಡೆಯಲು ಬಯಸುವ ಖಜಾನೆಯ ಹೆಸರು
- ಕುಟುಂಬ ಸದಸ್ಯರ ವಿವರಣೆ
- ಕೊನೆಯ ವೇತನ ಪ್ರಮಾಣ ಪತ್ರ
- ಬೇಬಾಕಿ ಪ್ರಮಾಣ ಪತ್ರ
- ಸರ್ಕಾರಿ ನೌಕರನ ಶೀಲ ಮತ್ತು ಹಿಂದಿನ ನಡತೆಗೆ ಸಂಬಂಧಿಸಿದಂತೆ ಯಾವುದೇ ಅಮಾನತ್ತುಗಳ ಇಲ್ಲವೇ ಪದಾವನತಿಗಳ ವಿವರಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಸರ್ಕಾರದಿಂದ ಪಿಂಚಣಿಯನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳು ಇದಾಗಿದೆ.