ಕಾರ್ಪೋರೇಟ್ ಅಲ್ಲದ, ಕೃಷಿಯೇತರವಾಗಿರುವ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳಿಗೆ ಸಾಲ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ 2015ರ ಏಪ್ರಿಲ್ 8ರಂದು ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY-Pradhan Mantri MUDRA Yojana) ಜಾರಿಗೊಳಿಸಲಾಯಿತು. ಪ್ರಧಾನಮಂತ್ರಿ ಮುದ್ರಾ ಯೋಜನೆಯು ಸ್ಥಳೀಯವಾಗಿ, ತಳಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯ ಮಾಡಿದೆ.
ಮುದ್ರಾ ಯೋಜನೆಯಡಿ ಅರ್ಹ ವ್ಯಕ್ತಿಗಳು ₹10 ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲ ಪಡೆಯಲು ನೀವು ಯಾವುದೇ ಆಸ್ತಿ, ದಾಖಲೆಗಳನ್ನು ಅಡಮಾನ ಇಡುವ ಅಗತ್ಯವಿಲ್ಲ. ಈ ಸ್ಕೀಮ್ ನಲ್ಲಿ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು. ಇದನ್ನು ಪಡೆಯಲು ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲ.
ಈ ಯೋಜನೆಯಡಿ ಪಡೆದ ಸಾಲವನ್ನು 12 ತಿಂಗಳಿಂದ ಐದು ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು. ಅಂದರೆ ನೀವು ಐದು ವರ್ಷಗಳವರೆಗೆ EMI ಅವಧಿಯನ್ನು ಹೊಂದಬಹುದು. ಐದು ವರ್ಷಗಳೊಳಗೆ ಪಾವತಿ ಮಾಡದಿದ್ದರೆ, ಅಧಿಕಾರಾವಧಿಯನ್ನು ಮತ್ತಷ್ಟು ವಿಸ್ತರಿಸಬಹುದು.
ಮುದ್ರಾ ಸಾಲ ಎಂದರೇನು ?
ಮುದ್ರಾ ಸಾಲ ಎಂದರೆ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ . ಅದರ ಮಾರ್ಗದರ್ಶನದಲ್ಲಿ ಬ್ಯಾಂಕುಗಳಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಸಾಲ ನೀಡಲಾಗುತ್ತದೆ. ಮುದ್ರಾ ಯೋಜನೆ (Mudra Yojana) ಯಡಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳು ಅಥವಾ ಘಟಕಗಳಿಗೆ ಅಗತ್ಯ ಸಾಲ ನೀಡಲಾಗುತ್ತದೆ.
ಸರಕಾರಿ ಸ್ಚಾಮ್ಯದ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಮೈಕ್ರೋ ಫೈನಾನ್ಸ್ ಅಥವಾ ನೀವು ಎಸ್ಬಿಐ (SBI)ನಲ್ಲಿ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆದಾರರಾಗಿದ್ದರೆ, ನೀವು ಎಸ್ಬಿಐನಿಂದ 50 ಸಾವಿರ ರೂಪಾಯಿಗಳ ಇ-ಮುದ್ರಾ ಸಾಲವನ್ನು ತೆಗೆದುಕೊಳ್ಳಬಹುದು. ಇ-ಮುದ್ರಾ ಸಾಲಕ್ಕಾಗಿ ನೀವು ಮನೆಯಿಂದಲೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರ ಈ ಮುದ್ರಾ ಯೋಜನೆಯಡಿ ಸಾಲ ಮಂಜೂರಾತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದೆ. ಫಲಾನುಭವಿಗಳು ಶುರು ಮಾಡುತ್ತಿರುವ ಉದ್ಯಮಕ್ಕೆ ಹಣಕಾಸಿನ ಅಗತ್ಯತೆ ಮತ್ತು ಆ ಉದ್ಯಮ ಯಾವ ಮಟ್ಟದ್ದು, ಎಂಥ ಸ್ವರೂಪದ್ದು ಎಂಬುದನ್ನು ಆಧರಿಸಿ ಈ ವರ್ಗಗಳನ್ನು ಮಾಡಲಾಗಿದೆ.
ಶಿಶು, ಕಿಶೋರ ಮತ್ತು ತರುಣ ಎಂಬ ಮೂರು ವಿಭಾಗಗಳಿದ್ದು, ಅದರಲ್ಲಿ ಶಿಶು ವರ್ಗದಡಿ 50 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಕಿಶೋರ ಕೆಟೆಗರಿಯಡಿ 50 ಸಾವಿರ ರೂ.ಗೂ ಮೇಲ್ಪಟ್ಟು ಮತ್ತು ತರುಣ ವಿಭಾಗದಡಿ 5 ಲಕ್ಷ ರೂ.ದಿಂದ 10 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. ಆರ್ಬಿಐನ ಮಾರ್ಗಸೂಚಿಯನ್ವಯ ಬಡ್ಡಿದರ ವಿಧಿಸಲಾಗುತ್ತಿದೆ.
ಮುದ್ರಾ ಯೋಜನೆಗೆ ಸೇರುವವರಿಗೆ ಮುದ್ರಾ ಕಾರ್ಡ್ ನೀಡಲಾಗುವುದು. ನೀವು ಈ ಕಾರ್ಡ್ ಅನ್ನು ಎಷ್ಟು ಬೇಕಾದರೂ ಬಳಸಬಹುದು. ಹೀಗಾಗಿ ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದು ಉತ್ತಮ ಆಯ್ಕೆ ಎಂದು ಹೇಳಬಹುದು. ಮುದ್ರಾ ಕಾರ್ಡ್ ಮೂಲಕ ಪಡೆದ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
ನೀವು ಪಾಲುದಾರಿಕೆಯ ಮೂಲಕ ವ್ಯಾಪಾರ ಮಾಡುತ್ತಿದ್ದರೂ ಸಹ ನೀವು ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಮೂರು ವಿಭಾಗಗಳ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ವರ್ಗದ ಆಧಾರದ ಮೇಲೆ ಸಾಲದ ಮೊತ್ತವೂ ಬದಲಾಗುತ್ತದೆ.
ನೀವು ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಕ್ ಗಳು ಮತ್ತು ಹಣಕಾಸುಯೇತರ ಕಂಪನಿಗಳಿಂದ ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಮುದ್ರಾ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಬಹುದು.