ನವದೆಹಲಿ: ರಾಜಕೀಯವಾಗಿ ಚರ್ಚೆ ನಡೆದಿದೆ. ಈ ಸರ್ಕಾರದಲ್ಲಿ ಸುಳ್ಳು ಹೇಳಿಕೆ, ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಟ್ವೀಟ್ ವಿಚಾರವಾಗಿ ಕೇಂದ್ರ ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟç ರಾಜಧಾನಿಯಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ಮುಡಾ ಪ್ರಕರಣ ಸಂಬಂಧ ಮೋದಿ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾತನಾಡಿದರು. ರಾಜಕೀಯವಾಗಿ ಕೆಲವು ಚರ್ಚೆ ನಡೆದಿರುತ್ತವೆ ಅದಕ್ಕೆ ಮಹತ್ವ ಕೊಡುವಂತಹ ಅಗತ್ಯವಿಲ್ಲ. ಕಾಂಗ್ರೆಸ್ (Congress) ಸರ್ಕಾರದವರು ಬಿಜೆಪಿ (BJP) ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು ಎಂದರು.
ಗಂಗೇನಹಳ್ಳಿ ಡಿನೊಟಿಫಿಕೇಷನ್ ವಿಚಾರವಾಗಿ ನನಗೆ ಯಾವುದೇ ನೋಟಿಸ್ ಕೊಟ್ಟಿರಲಿಲ್ಲ. ನನ್ನನ್ನು ಯಾರು ಸಂಪರ್ಕ ಮಾಡಿರಲಿಲ್ಲ. ನಾನು ಕದ್ದು ಹೋಗಲ್ಲ. ಈ ಕ್ಷಣದವರೆಗೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ಈ ಸರ್ಕಾರದಲ್ಲಿ ಸುಳ್ಳು ಹೇಳಿಕೆ, ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಆಗ್ರಹಿಸಿದರು.
ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು Pan Card ಇದ್ರೆ ಏನಾಗುತ್ತೆ ಗೊತ್ತಾ.? ಎಷ್ಟು ದಿನ ಜೈಲು ಶಿಕ್ಷೆ.? ದಂಡ ಎಷ್ಟು.?
ರಾಜಕೀಯವಾಗಿ ಕೆಲವು ಭಿನ್ನಾಭಿಪ್ರಾಯ ಇರುವುದು ಬೇರೆ ಆದರೆ ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಲು ಆಗುತ್ತಾ? ಅದಕ್ಕೆ ಏನಾದರೂ ದಾಖಲೆ ಇದಿಯಾ? ಕೆಲವರು ಸಂತೆ ಭಾಷಣ ಮಾಡುತ್ತಾರೆ. ಅದಕ್ಕೆ ಮಹತ್ವ ಕೊಡೋಕೆ ಆಗುತ್ತಾ? ಸಾಕ್ಷಿಗಳ ಆಧಾರದ ಮೇಲೆ ಮಾತನಾಡಿದರೆ ಉತ್ತರ ಕೊಡಬಹುದು. ರಾಜಕೀಯ ದ್ವೇಷಕ್ಕೆ ಮಾತನಾಡುತ್ತಾರೆ. ಹಿಂದೆ ಬಿಜೆಪಿ 40% ಆರೋಪ ಮಾಡಿದ್ದರು.ಈಗ 40% ಮೀರಿ ಹೋಗಿದೆ ಎಂದು ತುಮಕೂರು ಮೂಲದ ಗುತ್ತಿಗೆದಾರರು ಹೇಳಿದ್ದಾರೆ. ಇದಕ್ಕೆಲ್ಲಾ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.