ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ತಮ್ಮ ವರ್ಷಾಂತ್ಯದ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಪುಟಿನ್ ಅವರು ತನ್ನ ಗುರಿಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಶಾಂತಿ ಸ್ಥಾಪನೆಯಾಗುವ ತನಕ ಉಕ್ರೇನ್ನಲ್ಲಿ ತಮ್ಮ ಗುರಿಯ ಹಿಂದೆ ಸಾಗುವುದಾಗಿ ಘೋಷಿಸಿದರು. ಪುಟಿನ್ ಅವರು 2024ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಮರಳಿ ಭಾಗವಹಿಸಲು ಇಚ್ಛಿಸುವುದಾಗಿ ಘೋಷಿಸಿದ ಕೆಲ ಸಮಯದಲ್ಲಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ರಷ್ಯಾದಲ್ಲಿ ಅವರು ಹೊಂದಿರುವ ಛಾಪು, ಪ್ರಭಾವವನ್ನು ಗಮನಿಸಿದರೆ, 71 ವರ್ಷದ ಪುಟಿನ್ ಐದನೇ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, 2030ರ ತನಕ ತನ್ನ ಅಧ್ಯಕ್ಷೀಯ ಗದ್ದುಗೆಯನ್ನು ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಗೆಲುವು ಅಧ್ಯಕ್ಷರಾಗಿ ಅವರ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದ್ದು, ಅವರು ಒಟ್ಟು 24 ವರ್ಷಗಳ ಕಾಲ ರಷ್ಯಾ ಅಧ್ಯಕ್ಷರಾದಂತಾಗುತ್ತದೆ.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಪ್ರಶ್ನೋತ್ತರ ಅವಧಿಯಲ್ಲಿ ಪುಟಿನ್ ಅವರು ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಆ ರಾಷ್ಟ್ರ ನಾಜಿ ಮುಕ್ತವಾಗಬೇಕು, ನಿಶ್ಶಸ್ತ್ರೀಕರಣಗೊಳ್ಳಬೇಕು ಮತ್ತು ಅದು ನ್ಯಾಟೋಗೆ ಸೇರದೆ ತಟಸ್ಥವಾಗಿ ಉಳಿಯಬೇಕು ಎಂದರು. ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ದಿನದಿಂದಲೂ ಪುಟಿನ್ ನಿರಂತರವಾಗಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಪುಟಿನ್ ಅವರು ಪ್ರಸ್ತುತ ಉಕ್ರೇನ್ನಲ್ಲಿ ಅಂದಾಜು 6,17,000 ರಷ್ಯನ್ ಸೈನಿಕರು ಯುದ್ಧದಲ್ಲಿ ತೊಡಗಿದ್ದು, ಬಹುತೇಕ 2,44,000 ಜನರನ್ನು ವೃತ್ತಿಪರ ರಷ್ಯನ್ ಸೇನೆಯ ಜೊತೆಗೆ ಕಾರ್ಯಾಚರಿಸಲು ನೇಮಿಸಲಾಗಿದೆ ಎಂದರು. ಆದರೆ ಇನ್ನಷ್ಟು ಮೀಸಲು ಸೈನಿಕರನ್ನು ಉಕ್ರೇನ್ಗೆ ಈ ಸಂದರ್ಭದಲ್ಲಿ ರವಾನಿಸುವ ಅವಶ್ಯಕತೆ ಇಲ್ಲ ಎಂದು ಪುಟಿನ್ ಅಭಿಪ್ರಾಯ ಪಟ್ಟಿದ್ದಾರೆ.