ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿದ್ದು, ಇನ್ನೂ ಈ ವಿಚಾರವಾಗಿ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಪ್ರತಿಕ್ರಿಯೇ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಮಾಫಿಯಾಗಳು ಹೆಚ್ಚಾಗಿ ತಲೆ ಎತ್ತುತ್ತಿವೆ.
ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ರನ್ಯಾ ರಾವ್ ಅನೇಕ ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ತಂದೆ IPS ಅಧಿಕಾರಿ ಅಂತ ರನ್ಯಾಗೆ ರಕ್ಷಣೆ ಕೊಡ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದರು.
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಪೊಲೀಸರ ರಕ್ಷಣೆಯಲ್ಲಿ ರನ್ಯಾ ಓಡಾಡಿದ್ದಾಳೆ. ಸರ್ಕಾರಕ್ಕೆ ನಾಚಿಕೆ ಆಗಬೇಕು.14 ಕೆಜಿ ಚಿನ್ನ ಸಾಗಾಣೆ ಮಾಡ್ತಾರೆ ಅಂದರೆ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿದೆ ಅನ್ನಿಸುತ್ತೆ. ಸಿಐಡಿ ತನಿಖೆ ಯಾಕೆ ವಾಪಸ್ ಪಡೆದ್ರಿ? ಇದು ನಮಗೆ ಅನುಮಾನ ಬರ್ತಿದೆ. ರನ್ಯಾ ರಾವ್ ಉಳಿಸೋಕೆ ಸರ್ಕಾರ ಮುಂದಾಗ್ತಿರುವ ಅನುಮಾನ ಬರ್ತಿದೆ ಎಂದು ತಿಳಿಸಿದರು.