ಬೆಂಗಳೂರು: ರಾಜ್ಯದಲ್ಲಿ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ (Siddaramaiah) ಸರ್ಕಾರವೇ ಇದೆ ಎಂದು ಬಿಜೆಪಿಗೆ (BJP) ಸಿಎಂ ತಿರುಗೇಟು ನೀಡಿದ್ದಾರೆ.
GT Mall: ರೈತನಿಗೆ ಅವಮಾನ: ಬಿಬಿಎಂಪಿ ನೋಟಿಸ್ಗೆ ಜಿಟಿ ಮಾಲ್ ಮಾಲೀಕ ಹೇಳಿದ್ದೇನು?
ವಿಧಾನಸಭೆಯಲ್ಲಿ (Vidhanasabha Session) ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ (Private Sector Quota Bill) ವಿಚಾರದಲ್ಲಿ ಸಿಎಂ ಪೋಸ್ಟ್ ಪದೇ ಪದೇ ಬದಲಾಗಿದೆ. ಮೂರು ಬಾರಿ ನಿಲುವು ಬದಲಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಬೆಳವಣಿಗೆ ಒಳ್ಳೆಯದಲ್ಲ. ಇದೊಂದು ರೀತಿ ತುಘಲಕ್ ದರ್ಬಾರ್ ಆಗಿದೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಲಿ ಎಂದು ಒತ್ತಾಯಿಸಿದರು.
ಈ ವೇಳೆ ಉತ್ತರಿಸಿದ ಸಿಎಂ, ಯಾವ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಿಲ್ ಬಗ್ಗೆ ಕ್ಯಾಬಿನೆಟ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಿಲ್ಲ. ಆದರೆ ಅದಕ್ಕೂ ಮುನ್ನ ಮಾಧ್ಯಮಗಳಲ್ಲಿ ಬಂದಿದೆ. ಹಾಗಾಗಿ ಮುಂದಿನ ಕ್ಯಾಬಿನೆಟ್ನಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಬಿಲ್ ತರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.