ಬೆಂಗಳೂರು: ಬೆಂಕಿ ಇಲ್ಲದೆ ಹೊಗೆ ಆಡೊಲ್ಲ, ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಆಗ್ತಿರೋದು ಸತ್ಯ ಎಂದು ಮಾಜಿ ಸಚಿವ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಆಗ್ತಿರೋದು ಸತ್ಯ. ಬೆಂಕಿ ಇಲ್ಲದೆ ಹೊಗೆ ಆಡೊಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇವೆ.
ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತಾರೆ. ಶ್ರೀರಾಮುಲು ಮಾತಾಡಿರೋದು ನೋಡಿದ್ದೇನೆ. ಅವರನ್ನ ಹೈಕಮಾಂಡ್ ಕರೆದಿದೆ. ಅವರ ಜೊತೆ ಮಾತಾಡ್ತಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. ರಾಮುಲು ವಾಲ್ಮೀಕಿ ಸಮುದಾಯದ ನಾಯಕ. ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. 8-10 ದಿನಗಳಲ್ಲಿ ಎಲ್ಲಾ ಗೊಂದಲ ನಿವಾರಣೆ ಆಗುತ್ತದೆ ಎಂದು ಹೇಳಿದರು.
Post Office Jobs: 10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ತಿಂಗಳಿಗೆ ₹ 30,100 ಸಂಬಳ
ಯತ್ನಾಳ್ ಟೀಂ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೂ ಕೂಡಾ ಉಚ್ಚಾಟನೆ ಆಗಬಾರದು. ಮನುಷ್ಯ ಎಂದ ಮೇಲೆ ತಪ್ಪು ಆಗೋದು ಸಹಜ. ಯತ್ನಾಳ್ ಕೂಡಾ ಮಂತ್ರಿ ಆಗಿದ್ದವರು.
ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರು. ವಿಜಯೇಂದ್ರ ಕಿರು ವಯಸ್ಸಿನಲ್ಲಿ ಅಧ್ಯಕ್ಷ ಆಗಿರೋದಕ್ಕೆ ವಿರೋಧ ಇರಬಹುದು. ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಅಧ್ಯಕ್ಷ ಮಾಡಿದ್ದಾರೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಪರಿಹಾರ ಮಾಡುತ್ತದೆ ಎಂದರು.