ಬೆಂಗಳೂರು : ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಔಷಧಿಗಳು ಕಡಿಮೆ ಕ್ವಾಂಟಿಟಿಯಲ್ಲಿ ಖರೀದಿ ಮಾಡುವುದು ಅಂತಿಮವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಔಷಧಿ ಖರೀದಿ ಮಾಡಲು ಸೂಚನೆ ಕೊಟ್ಟಿದ್ದೇವೆ. ಹೀಗಾಗಿ ಅವರಿಗೆ ಹಣ ಕೂಡ ಒದಗಿಸಿದ್ದೇವೆ. ಇಲ್ಲಿಂದ ಸರಬರಾಜು ಆಗೋದು ತಡ, ಆದರೆ ಸ್ಥಳೀಯವಾಗಿಯೇ ಖರೀದಿ ಮಾಡಿಕೊಡಲು ಅವಕಾಶವನ್ನು ಕೊಟ್ಟಿದ್ದೇವೆ. ಎಎಸ್ ಎಂಸಿಎಲ್ನಿಂದಲೇ ಔಷಧ ಪೂರೈಕೆ ಆಗಬೇಕು ಎಂದರು.
ಏರ್ಪೋರ್ಟ್ ಮಾದರಿಯಲ್ಲಿ ರೈಲು ನಿಲ್ದಾಣ ಅಭಿವೃದ್ಧಿ – ಕೇಂದ್ರ ಸಚಿವ ವಿ.ಸೋಮಣ್ಣ
ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ. ಈಗ ಸರಬರಾಜು ಆಗಿರುವ ಔಷಧಿಗಳು ಎರಡು ವರ್ಷದ ಹಳೆಯ ಇಂಡೆಂಟ್ ಮೇಲೆ ಖರೀದಿ ಮಾಡಿರೋದು. ಈ ವರ್ಷದ ಇಂಡೆಂಟ್ ಪ್ರಕಾರವೇ ಈ ವರ್ಷವೇ ಖರೀದಿ ಮಾಡಬೇಕು ಎಂಬ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಸಾಕಷ್ಟು ಇದೆ. ಯಾವ ಔಷಧಗಳು ಇಲ್ಲ ಅದನ್ನು ಸ್ಥಳೀಯವಾಗಿ ಖರೀದಿ ಮಾಡಿ ಹೇಳಿದ್ದೇವೆ ಎಂದರು. ಸರ್ಕಾರ ಬಂದಾಗ ಕೇವಲ 40% ಔಷಧ ಮಾತ್ರ ಸಿಕ್ತಾ ಇತ್ತು. ಉಳಿದಿದ್ದನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗ್ತಿತ್ತು. ಆದರೆ ಮೊದಲಿಗಿಂತ ಈಗ ಸಾಕಷ್ಟು ಸುಧಾರಣೆಯಾಗಿದೆ. ಈಗ 75% ವೈದ್ಯಕೀಯ ಸರಬರಾಜು ನಿಗಮದಿಂದಲೇ ಸರಬರಾಜು ಮಾಡುತ್ತಿದ್ದೇವೆ ಎಂದರು.