ಧಾರವಾಡ: ಅದಾನಿ ಬಗ್ಗೆ ಬಿಜೆಪಿಯವರು ಮಾತುಗಳನ್ನೇ ಆಡುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಶಾಸಕ ಮಹೇಶ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಅದಾನಿ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅವರು ನಮಗೆ ಹತ್ತಿದವರಲ್ಲ. ಅವರ ಬಗ್ಗೆ ಕೇಸ್ ಆಗಿರುವುದು ಅಮೇರಿಕಾದಲ್ಲಿ. ಅಲ್ಲಿನ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಮ್ಮ ರಾಜ್ಯದಲ್ಲೇ ವಕ್ಫ, ಮುಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಕಾಂಗ್ರೆಸ್ನ ಎಷ್ಟು ಶಾಸಕರು, ಸಚಿವರು ಮಾತನಾಡಿದ್ದಾರೆ ಹೇಳಿ ನೋಡೋಣ ಎಂದಿದ್ದಾರೆ.
PM Kisan tractor: ಟ್ರಾಕ್ಟರ್ ಖರೀದಿಸುವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಇಂದೇ ಅರ್ಜಿ ಸಲ್ಲಿಸಿ
ಅದಾನಿ ಬಗ್ಗೆ ಮಾತನಾಡುವ ಅವಶ್ಯಕತೆ ನಮಗಿಲ್ಲ. ಅಮೇರಿಕಾದ ನ್ಯಾಯಾಲಯದಲ್ಲಿ ಕೇಸ್ ಇದೆ. ಭಾರತದಲ್ಲಿ ಆಗಿದ್ದರೆ ನಾವು ಮಾತನಾಡುತ್ತಿದ್ದೆವು. ಅದಾನಿ ಬಗ್ಗೆ ನಮಗೇನು ಪ್ರೀತಿ, ಪ್ರೇಮ ಇಲ್ಲ. ಅವರೇನು ನಮಗೆ ಹತ್ತಿದವರಲ್ಲ, ಹೊಂದಿದವರಲ್ಲ.
ಇವತ್ತು ಇಡೀ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆದಿದೆ. ಭೂಮಿ ಕಬಳಿಸುವ ಹುನ್ನಾರ ನಡೆದಿದೆ ಇದರ ಬಗ್ಗೆ ಕಾಂಗ್ರೆಸ್ನ ಎಷ್ಟು ಶಾಸಕರು, ಸಚಿವರು ಮಾತನಾಡಿದ್ದಾರೆ? ವಾಲ್ಮೀಕಿ ಹಗರಣದ ಬಗ್ಗೆ ಎಷ್ಟು ಜನ ಆ ಸಮಾಜದ ಶಾಸಕರು ಮಾತನಾಡಿದ್ದಾರೆ? ಮೊದಲು ಇಲ್ಲಿಯ ಸಮಸ್ಯೆ ಬಗ್ಗೆ ಕಾಂಗ್ರೆಸ್ ಶಾಸಕರು, ಸಚಿವರು ಬಾಯಿ ತೆರೆಯುವ ಕೆಲಸ ಮಾಡಲಿ. ಅದಾನಿ ಬಗ್ಗೆ ಆ ಮೇಲೆ ವಿಚಾರ ಮಾಡಲಿ ಎಂದಿದ್ದಾರೆ.