ಕೊಪ್ಪಳ: ಬಲ್ಟೋಡಾ ಫ್ಯಾಕ್ಟರಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಮುಂದೆ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಬಿಎಸ್ಪಿಎಲ್ ಕಾರ್ಖಾನೆ ನಿರ್ಮಾಣ ವಿರೋಧಿಸಿ ಕೇಂದ್ರ ಸಚಿವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.
ನಗರಕ್ಕೆ ಬಿಎಸ್ಪಿಎಲ್ ಕಾರ್ಖಾನೆ ಬೇಡವೇ ಬೇಡ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬಲ್ಟೋಡಾ ಫ್ಯಾಕ್ಟರಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಮುಂದೆ ಇಲ್ಲ. ಇದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಂಪನಿ ನಡುವಿನ ಒಪ್ಪಂದ ಎಂದು ಹೇಳಿದ್ರು.
Limited-Time Deal: ವಿದೇಶಿ ಪ್ರವಾಸ ಮಾಡುವವರಿಗೆ ಗೋಲ್ಡನ್ ಆಫರ್: ಜಸ್ಟ್ 11 ರೂಪಾಯಿಗೆ ವಿಮಾನ ಟಿಕೆಟ್..!
ಡಿ.ಕೆ ಶಿವಕುಮಾರ್ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ. ರಾಜ್ಯದ ಜನ ಅವರ ಪಕ್ಷಕ್ಕೆ 138 ಸ್ಥಾನ ಕೊಟ್ಟಿದ್ದಾರೆ. ನಟ್ಟು ಬೋಲ್ಟ್ ಸರಿಮಾಡಲು ಅಧಿಕಾರ ಕೊಟ್ಟಿದ್ದಾರಾ? ಆ ಕೆಲಸ ಮಾಡಲು ಬೇರೆಯವರು ಇದ್ದಾರೆ. ರಾಜ್ಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೇ ಇವರ ಬಗ್ಗೆ ಅವರು, ಅವರ ಬಗ್ಗೆ ಇವರು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.