ಬೆಂಗಳೂರು: ಕಾಂಗ್ರೆಸ್ ನ ಧ್ಯೇಯ ಏನು ಅಂದರೆ ಜನರಿಗೆ ನ್ಯಾಯ ಕೊಡಬೇಕು ಎಂಬುದು ಅಲ್ಲ ನೆಹರು ಕುಟುಂಬದ ಕಟ್ಟ ಕಡೆಯ ಸದಸ್ಯನಿಗೂ ಅಧಿಕಾರ ಸಿಗಬೇಕೆಂಬುದು ಕಾಂಗ್ರೆಸ್ ನಾಯಕರ ಬಾಯಲ್ಲಿ ಮಾತ್ ಎತ್ತಿದ್ರೆ ಸಾಕು ಅಂಬೇಡ್ಕರ್ ಹೆಸರು ಪಠಣ ಮಾಡ್ತಾರೆ ಅಂಬೇಡ್ಕರ್ ರವರಿಗೆ ಗೌರವ ರೀತಿ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಇವಾಗ ಅಂಬೇಡ್ಕರ್ ಹೆಸರು ಹೇಳೋಕೆ ನಿಜವಾಗಿಯೂ ನೈತಿಕತೆ ಇದೆಯಾ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿ ಕಾರಿದರು.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡುವ ಯೋಗ್ಯತೆ ಕಾಂಗ್ರೆಸ್ಸಿಗೆ ಇರಲಿಲ್ವಾ ಕಾಂಗ್ರೆಸ್ ನವರಿಂದ ಅಂಬೇಡ್ಕರ್ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಲ್ಲಾ ಸಮಾಜಗಳನ್ನು ಮತ ಬ್ಯಾಂಕ್ ಗೆ ಉಪಯೋಗ ಮಾಡಿಕೊಂಡರೇ ವಿನಹ ಆ ಸಮಾಜಗಳಿಗೆ ಯಾವತ್ತಿಗೂ ನ್ಯಾಯ ಕೊಟ್ಟಿಲ್ಲ ಅಂಬೇಡ್ಕರ್ ರವರ ಆಶಯವನ್ನು ಅನುಷ್ಠಾನ ಮಾಡ್ತಿರೋದು ಪ್ರಧಾನಿ ನರೇಂದ್ರ ಮೋದಿಯವರು
ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಈ ಸಂವಿಧಾನ ಉಳಿಸುವಂತ ಮಹತ್ತರ ಜವಾಬ್ದಾರಿ ಇದೆ ಇದನ್ನು ಅರ್ಥ ಮಾಡಿಕೊಂಡು ಕುಂತಲ್ಲಿ ನಿಂತಲ್ಲಿ ಚರ್ಚೆ ಮಾಡಿ ಇದರ ಬಗ್ಗೆ ಕೇವಲ ಭಾಷಣ ಹೊಡೆಯದೇ, ಇದನ್ನು ಅಳವಡಿಸಿಕೊಂಡು ಅಂಬೇಡ್ಕರ್ ಇಟ್ಟ ಗುರಿ ತಲುಪಬೇಕು ಎಂದು ಹೇಳಿದರು.