ಬೆಂಗಳೂರು:- ಪ್ರಜ್ವಲ್ ಪ್ರಕರಣ ಸಿಬಿಐಗೆ ಒಪ್ಪಿಸುವ ಅವಶ್ಯಕತೆಯಿಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಪರಿಷತ್ ಚುನಾವಣೆಗೂ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್?
ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಲು ಸರ್ಕಾರ ಎಸ್ಐಟಿಯನ್ನು ರಚಿಸಿದೆ ಮತ್ತು ಅದು ತನಿಖೆ ನಡೆಸುತ್ತಿದೆ, ತಾನು ಸರ್ಕಾರದ ಭಾಗ ಮತ್ತು ಒಬ್ಬ ಮಾಜಿ ಗೃಹ ಸಚಿವನಾಗಿರುವುದರಿಂದ ಹೇಳಿಕೆ ನೀಡುವುದು ಸರಿಯೆನಿಸಲ್ಲ. ತನಿಖಾ ತಂಡದಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ, ಅವರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಎ ಒಪ್ಪಿಸಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ? ಅಂತ ಪತ್ರಕರ್ತರು ಹೇಳಿದಾಗ, ಅದರ ಅವಶ್ಯಕತೆಯಿಲ್ಲ, ಕೇಸನ್ನು ಸಿಬಿಐಗೆ ಕೊಟ್ಟರೆ ಬಿಜೆಪಿ ವಾಶಿಂಗ್ ಮಶೀನ್ ನಲ್ಲಿ ಆರೋಪಿಗಳು ಸ್ವಚ್ಛಗೊಂಡು ಕ್ಲೀನ್ ಚಿಟ್ ಪಡೆಯುತ್ತಾರೆ. ಬಿಜೆಪಿ ನಾಯಕರೇ ಸಿಬಿಐಯನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಂತ ಹೇಳಿದ್ದರು, ಎಸ್ಐಟಿ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.