ಬೆಂಗಳೂರು: ನಾನು ಖರೀದಿಸಿರುವ ಜಮೀನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇತಗಾನಹಳ್ಳಿ ಜಮೀನು ನಾನು 40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದು. 40 ವರ್ಷಗಳ ಹಿಂದೆ ಹತ್ತಾರು ಬಾರಿ ಸರ್ವೆ ಮಾಡಿಕೊಂಡಿದ್ದಾರೆ.
ಹತ್ತಾರು ಬಾರಿ ಎಲ್ಲಾ ರೀತಿ ತನಿಖೆಗಳು ನಡೆದಿವೆ. ತನಿಖೆ ಮಾಡೋಕೆ ನಾನು ಮುಕ್ತವಾಗಿ ಇದ್ದೇನೆ. ನಿನ್ನೆ ಕೆಲವು ಕಾಂಗ್ರೆಸ್ ಪುಡಾರಿಗಳು ಕರೆದುಕೊಂಡು ಬಂದು ರಿಯಾಕ್ಷನ್ ಕೊಡಿಸಿದ್ದಾರೆ ನೋಡಿದ್ದೇನೆ. 40 ವರ್ಷಗಳಿಂದ ನನ್ನ ಹತ್ರ ಯಾರು ಬಂದಿರಲಿಲ್ಲ. ಈಗ ಎಲ್ಲಿಂದ ಉದ್ಬವ ಆದ್ರು ದೂರುದಾರರು ಅಂತ ಪ್ರಶ್ನೆ ಮಾಡಿದ್ರು.
ಕಂಕುಳಿನ ಬೆವರಿನಿಂದ ಕೆಟ್ಟ ವಾಸನೆ ಬರ್ತಿದ್ಯಾ..? ಹಾಗಿದ್ರೆ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ!
1986 ರಲ್ಲಿ ಸಿಎಂ ಲಿಂಗಪ್ಪ ಮತ್ತು ರಾಮಚಂದ್ರ ಹೆಸರಿನ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನ ಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು, ತಮ್ಮ ದೂರಿನಲ್ಲಿ ಅವರು ಖರೀದಿಸಿದ್ದಾರೆ ಅಂತ ಹೇಳಿದ್ದರೇ ಹೊರತು ಕಬಳಿಸಿದ್ದಾರೆ ಅಂತ ಹೇಳಿರಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ,
ತಾನು ಕೇತಗಾನಹಳ್ಳಿಯಲ್ಲಿ ಖರೀದಿಸಿದ ಭೂಮಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ ಎಂದರು. ರಾಜ್ಯದ ಸಂಪತ್ತನ್ನು ರಕ್ಷಿಸುವವನ ಹಾಗೆ ಪೋಸು ನೀಡುವ ಎಸ್ ಆರ್ ಹಿರೇಮಠ ಜಮೀನು ವಿಷಯವನ್ನು ಪ್ರಸ್ತಾಪಿಸಿದ್ದಾರೆ, ಹೈಕೋರ್ಟ್ ನಿಂದ ತನಗೆ ಯಾವುದೇ ನೋಟೀಲ್ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.