ಚಿಕ್ಕಮಗಳೂರು:- ಚಿಕ್ಕಮಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ.
ನಗರ ಉಪವಿಭಾಗದ ಘಟಕ-1, 2,3 ಮತ್ತು ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳ ಮಾರ್ಕೆಟ್ ರಸ್ತೆ, ವಿಜಯಪುರ ಫೀಡರ್, ಜೈಲ್ ರೋಡ್, ಆಜಾದ್ ಪಾರ್ಕ್, ಜೋಳ್ದಾಳ್, ಶಿರವಾಸೆ, ಮೂಗ್ತಿಹಳ್ಳಿಮಾರ್ಗಗಳಲ್ಲಿ ಪರಿವರ್ತಕ ಕೇಂದ್ರವನ್ನು ಸ್ಥಳಾಂತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಡಿಸೆಂಬರ್ 28ರಂದು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸದರಿ ಪೀಡರ್ಗಳ ವ್ಯಾಪ್ತಿಗೆ ಬರುವ ಪ್ರದೇಶಗಳಾದ ಗೌರಿಕಾಲುವೆ, ಉಪ್ಪಳ್ಳಿ, ವಿಜಯಪುರ, ಐ.ಜಿ. ರಸ್ತೆ, ಬಾರ್ಲೈನ್ ರಸ್ತೆ, ಮಧುವನ ಲೇ ಔಟ್, ಕಲ್ಲುದೊಡ್ಡಿ, ನೆಹರು ನಗರ, ಮೂಗ್ತಿಹಳ್ಳಿ, ಮಲ್ಲಂದೂರು, ಡಿ.ಸಿ ಕಛೇರಿ, ಎಸ್.ಪಿ. ಕಛೇರಿ, ಬೋಳರಾಮೇಶ್ವರ ದೇವಸ್ಥಾನ, ಶಿರವಾಸೆ, ಇಂದಾವರ, ಜೋಳ್ದಾಳ್, ಆವತಿ, ಬಸವನಹಳ್ಳಿ ಮುಖ್ಯ ರಸ್ತೆ, ಆರ್.ಜಿ. ರಸ್ತೆ, ಕೆ.ಎಂ. ರಸ್ತೆ, ಸುತ್ತ ಮುತ್ತಲಿನ ಪ್ರದೇಶಗಳಿಗೆ ಡಿಸೆಂಬರ್ 28 ರಂದು ಬೆಳಿಗ್ಗೆ 10 ಗಂಟೆ ಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.