ಕಲಬುರಗಿ: ಕೆಲವು ತಿಂಗಳಿನಿಂದ ರೈತರ ಜಮೀನು, ಮಠ-ಮಂದಿರಗಳ ಜಾಗವನ್ನು ವಕ್ಫ್ ಕಬಳಿಸುವ ಹುನ್ನಾರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವು ತಿಂಗಳಿನಿಂದ ರೈತರ ಜಮೀನು, ಮಠ-ಮಂದಿರಗಳ ಜಾಗವನ್ನು ವಕ್ಫ್ ಕಬಳಿಸುವ ಹುನ್ನಾರ ನಡೆದಿದೆ. ಹೀಗಾಗಿ, ವಕ್ಫ್ ವಿರುದ್ಧ ಹೋರಾಟ ಇಟ್ಟುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
Chanakya Niti: ಜೀವನದಲ್ಲಿ ಬೇಗ ಯಶಸ್ವಿ ಆಗಬೇಕಂದ್ರೆ ಚಾಣಕ್ಯ ಹೇಳಿದ ಈ ಮಾತುಗಳನ್ನು ಅನುಸರಿಸಿ.!
ಇನ್ನೂ ಇ.ಡಿ ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಅವರನ್ನ ಟಾರ್ಗೆಟ್ ಮಾಡ್ತಿದೆ ಅಂತಾ ಇವತ್ತೋ ನಾಳೆಯೋ ಮುಖ್ಯಮಂತ್ರಿ ಹೇಳಿಕೆ ಕೊಡಬಹುದು. ಮುಡದಲ್ಲಿ ಹಗರಣ ಆಗಿಲ್ಲ ಅಂತಾ ಸಿಎಂ ಹೇಳಿದ್ರು. ನಾವು ಕೂಡ ಹೋರಾಟ ಮಾಡಿದ್ದೇವೆ. ಬ್ರೋಕರ್ಗಳ ಮೂಲಕ ರಿಯಲ್ ಎಸ್ಟೇಟ್ಗಳ ಪಾಲಾಗಿವೆ. ಬಡವರ ಸೈಟ್ಗಳು ಶ್ರೀಮಂತರ ಪಾಲಾಗಿವೆ. ಮೊದಲ ಹಂತದಲ್ಲಿ ಇ.ಡಿ 700 ಕೋಟಿಯಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿದೆ. ಕಾನೂನು ಬಾಹಿರವಾಗಿ ಸೈಟ್ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋದು ಇ.ಡಿ ವರದಿ ನೀಡಿದೆ ಎಂದು ತಿಳಿಸಿದರು.