ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲಿರುವ ಮಹಾನಗರಗಳಲ್ಲಿ ಒಂದು. ಆರ್ಥಿಕತೆಯ ವಿಷಯದಲ್ಲಿ ಕರ್ನಾಟಕಕ್ಕೆ ಬೆಂಗಳೂರೇ ಹೃದಯ ಭಾಗ. ಇಂತಹ ಸಿಲಿಕಾನ್ ಸಿಟಿಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ, ದೇಶ ವಿವಿಧೆಡೆಗಳಿಂದ ಕೆಲಸ ಅರಸಿ ಬರುತ್ತಾರೆ. ಬೆಂಗಳೂರಲ್ಲಿ ಕೆಲಸ ಸಿಕ್ಕರೆ ಲೈಫೇ ಸೆಟಲ್ ಎಂದುಕೊಳ್ಳುವವರೂ ಇದ್ದಾರೆ.
Health Tips: ಬೂದುಕುಂಬಳ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?
ಹಾಗಾದರೆ ಬೆಂಗಳೂರಲ್ಲಿ ಬೇಗ ಕೆಲಸ ಸಿಗಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಸಾಲಿನ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು: 3
ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೊಮಾ ಇನ್ ಲೈಬ್ರರಿ ಸೈನ್ಸ್ (ದ್ವಿತೀಯ ಪಿಯುಸಿ ನಂತರದ ಎರಡು ವರ್ಷದ ಕೋರ್ಸ್)ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ: 17,000 ರೂಪಾಯಿ ಮಾಸಿಕ ಶಿಷ್ಯವೇತನ.
ಅರ್ಜಿ ಸಲ್ಲಿಕೆ: ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ಭರ್ತಿ ಮಾಡಿ, ಸ್ವಯಂ ದೃಢೀಕರಿಸಿ ಈ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ: ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು- 560 001
ಈ ಹುದ್ದೆಗೆ ಸಂದರ್ಶನದ ಮೂಲಕ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ನವೆಂಬರ್ 26. ಹೆಚ್ಚಿನ ಮಾಹಿತಿಗೆ www.bcu.ac.in ಭೇಟಿ ನೀಡಿ.
ಸೂಚನೆ: 2024-25ನೇ ಸಾಲಿನಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು. ಈಗಾಗಲೇ 2023-24ನೇ ಸಾಲಿನಲ್ಲಿ ಅಪ್ರೆಂಟಿಸ್ಗಳಾಗಿ ತರಬೇತಿ ಪಡೆದಿರುವ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.