ಕೋಲಾರ:-ಜಾತಿ ಪ್ರಮಾಣ ಪತ್ರ ವಿಚಾರ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರದ ತೀರ್ಮಾನಕ್ಕೆ ಕಾದು ನೋಡಬೇಕು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ರು.
ನಗರದಲ್ಲಿ ಸುದ್ದಿಗರಾರಂದಿಗೆ ಮಾತನಾಡಿದ ಅವ್ರುಕೋರ್ಟ್ ತೀರ್ಪಿನ ಸಂಪೂರ್ಣ ವರದಿಯನ್ನು ನಾನು ಇನ್ನೂ ಗಮನಿಸಿಲ್ಲಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ.
ನಮ್ಮ ವಕೀಲರ ಬಳಿ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. 2008ರಿಂದಲೂ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ, ಮುಂದೆಯೂ ಇರ್ತಾರೆ. ಅವರು ರಾಜಕೀಯವಾಗಿ ಮುಗಿಸಲು ಹೋದ್ರೆ, ಜನ ನನ್ನ ಪರವಾಗಿ ಇರ್ತಾರೆ. ಇದರಲ್ಲಿ ಎಲ್ಲಾ ಪಕ್ಷದವರೂ ಸೇರುತ್ತಾರೆ ಎಂದು ಹೇಳಿದರು.