ಕಲಬುರಗಿ: ಡಿಸಿಎಂ ಡಿಕೆಶಿ ಕೇಸ್ ವಿಚಾರದಲ್ಲಿ ಬಿಜೆಪಿ ಯಾವತ್ತೂ ಕಾನೂನು ಉಲ್ಲಂಘಿಸಿಲ್ಲ.ಕಾನೂನು ಜೊತೆಗೇನೆ ಪ್ರಕರಣವನ್ನ ಸಿಬಿಐ ಗೆ ಒಪ್ಪಿಸಿದ್ದೇವೆ ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಕಲಬುರಗಿಯಲ್ಲಿಂದು ಮಾತನಾಡಿದ ಅಶ್ವಥ್ ನಾರಾಯಣ್ ನಾವು ಕಾನೂನು ಉಲ್ಲಂಘಿಸಿದ್ರೆ ಇಷ್ಟೊತ್ತಿಗೆ ಕೋರ್ಟಲ್ಲಿ ರಿಜೆಕ್ಟ್ ಆಗ್ತಿತ್ತು.ಆದ್ರೆ ಕಳ್ಳನಿಗೊಂದು ಪಿಳ್ಳೆನೆವ ಅನ್ನೋತರ ಕಾಂಗ್ರೆಸ್ ತರಾತುರಿ ಸಂಪುಟ ಸಭೆ ನಡೆಸಿ ನಿರ್ಣಯ ಕೈಗೊಂಡಿದೆ.ಇಷ್ಟುದಿನ ಬಿಟ್ಟು ಈಗ್ಯಾಕೆ ನಿರ್ಧಾರ ಮಾಡಿದ್ರು. ಅಂತಿಮವಾಗಿ ಎಲ್ಲವೂ ಕೋರ್ಟಲ್ಲಿ ತೀರ್ಮಾನವಾಗುತ್ತೆ ಅಂತ ಹೇಳಿದ್ರು.