ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚೌಕಟ್ಟನ್ನು ತಿರುಚುವ ಪ್ರಯತ್ನಗಳ ವಿರುದ್ಧ ಭಾರತ ಎಚ್ಚರಿಕೆ ನೀಡಿದೆ. ಇಂತಹ ಕ್ರಮಗಳು ಶಾಶ್ವತ ಸದಸ್ಯತ್ವದ ವಿಸ್ತರಣೆ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಕಡಿಮೆ ಪ್ರಾತಿನಿಧ್ಯವನ್ನು ಪರಿಹರಿಸುವಂತಹ ಮಹತ್ವದ ಅಂಶಗಳನ್ನು ಅನಿರ್ದಿಷ್ಟವಾಗಿ ಮುಂದೂಡುವ ಹುನ್ನಾರವಾಗಿದೆ ಎಂದು ಆರೋಪಿಸಿದೆ.
ಭದ್ರತಾ ಮಂಡಳಿಯ ಸದಸ್ಯತ್ವದಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಹೆಚ್ಚಳದ ಪ್ರಶ್ನೆ ಕುರಿತು ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪಿ.ಹರೀಶ್ ಈ ಹೇಳಿಕೆ ನೀಡಿದ್ದಾರೆ.
ಯುಎನ್ಎಸ್ಸಿ ಸುಧಾರಣೆಯ ತುರ್ತು ಅಗತ್ಯವನ್ನು ಹಲವಾರು ದಶಕಗಳಿಂದ ಸಾಮೂಹಿಕವಾಗಿ ಪುನರುಚ್ಚರಿಸಿದರೂ, 1965 ರಿಂದ ಕೌನ್ಸಿಲ್ ಅನ್ನು ಕೊನೆಯದಾಗಿ ಶಾಶ್ವತವಲ್ಲದ ವಿಭಾಗದಲ್ಲಿ ವಿಸ್ತರಿಸಿದಾಗಿನಿಂದ ಈ ನಿಟ್ಟಿನಲ್ಲಿ ತೋರಿಸಲು ನಮಗೆ ಯಾವುದೇ ಫಲಿತಾಂಶಗಳಿಲ್ಲ ಎಂಬುದು ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು.