ಬೆಳಗಾವಿ : ಮಾಜಿ ಸಚಿವ ಈಶ್ವರಪ್ಪ ಮನೆಯಲ್ಲಿ ಬಿಜೆಪಿ ನಾಯಕರ ಸಭೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ವಿಶೇಷತೆ ಏನೂ ಇಲ್ಲ. ನಾನು ಮುಂಬೈನಿಂದ ಬೆಂಗಳೂರಿಗೆ ಬಂದ ತಕ್ಷಣವೇ ಯತ್ನಾಳ ಕಾಲ್ ಮಾಡಿದ್ರು. ಈಶ್ವರಪ್ಪ ಮನೆಗೆ ಹೋಗಿ ಬರೋಣ ಎಂದು ಯತ್ನಾಳ್ ಕಾಲ್ ಮಾಡಿ ಕರೆದರು.
ಮಾಡ ಹಾಗಲಕಾಯಿ ಬಗ್ಗೆ ಗೊತ್ತಾ.? ಇದರ ಅದ್ಭುತ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ..?
ಆದರೆ ಅಂದು ಈಶ್ವರಪ್ಪ ಮನೆಗೆ ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ರಾಜುಗೌಡ ಬಂದಿದ್ದು ಗೊತ್ತಾದ್ರೆ ನಾನು ಒಳಗೆ ಹೋಗುತ್ತಿರಲಿಲ್ಲ. ಈಶ್ವರಪ್ಪ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೇ ಆಗಿಲ್ಲ. ಈಶ್ವರಪ್ಪ-ಯತ್ನಾಳ್ ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಬಗ್ಗೆ ಚರ್ಚಿಸಿದರು ಎಂದು ರಮೇಶ್ ಜಾರಕಿಹೊಳಿ ಹೇಳಿದರು.