ಬೆಂಗಳೂರು: ಸಾಮಾನ್ಯ ವಾಗಿ 32-33 ಆದ್ಮೇಲೆ ಮದ್ವೆ ಆಗೋ ಯುವಕರಿಗೆ ಹೆಣ್ಣು ಸಿಗೋದು ಕಷ್ಟ ಹೀಗೆ ಟೈಮಿಗೆ ಮದ್ವೆ ಆಗದೆ ಗೊತ್ತಿರೋರತ್ರ ಮದ್ವೆ ಮಾಡ್ಸಿ ಅಂತಾ ಹೋಗಿದ್ದ ವ್ಯಕ್ತಿಗೆ ಆಗಿದ್ದೇ ಬೇರೆ.. ಮದ್ವೆ ಮಾಡಿಸ್ತೀವಿ ಬಾ ಅಂತಾ ಹೆಣ್ಣು ತೋರಿಸಿದ್ದ ಗ್ಯಾಂಗ್ ಆತನನ್ನ ಸೀದಾ ಸ್ಟೇಷನ್ ಗೆ ಹೋಗೋ ತರ ಮಾಡಿತ್ತು.. ಅಷ್ಟಕ್ಕೂ ಏನದು ಸ್ಟೋರಿ ಅಂತೀರಾ ಈ ಸುದ್ದಿ ನೋಡಿ.
ಹೌದು.. ಈಗಿನ ಜನರೇಷನ್ ನ ಗಣ್ಮಕ್ಳು 30ದಾಟೋವರ್ಗೂ ಮದ್ವೆ ಆಗಲ್ಲ ಅಂತಾರೆ.. ವರ್ಷಗಳು ಎಷ್ಟು ಬೇಗ ಹೋಗ್ತಾವೇ ಗೊತ್ತೆ ಆಗಲ್ಲ.. ಕೆಲಸ, ದುಡ್ಡು ಅನ್ನೋ ಟೆನ್ಷನ್ ಅಲ್ಲಿ 30 ವರ್ಷ ರಪ್ ಆಂತಾ ಕ್ರಾಸ್ ಆಗ್ಬಿಡುತ್ತೆ.. ಆಮೇಲೆ ಮದ್ವೆ ಇನ್ನೊಂದೆರಡು ವರ್ಷ ಲೇಟಾಗುತ್ತೆ.. ವಿಷ್ಯ ಏನಂದ್ರೆ ಈ ವಯಸ್ಸಿಗೆ ಹುಡ್ಗೀರ್ ಸಿಗೋದು ಕಷ್ಟ ಆಗ್ಬಿಟ್ಟಿದೆ..
ಹೀಗೆ 34 ವರ್ಷ ವಯಸ್ಸಾಯ್ತು ಗುರು ಇನ್ನೂ ಮದುವೆ ಆಗಿಲ್ಲ ಅಂತಾ ಹೆಣ್ಣು ಹುಡುಕ್ತಿದ್ದ 34ವರ್ಷದಾತನೊಬ್ಬ ಹೆಣ್ಣು ಹುಡುಕ್ತಿದ್ದ.. ಪರಿಚಯಸ್ಥರ ಬಳಿ ಕೂಡ ಯಾರಾದ್ರು ಇದ್ರೆ ಹೇಳ್ರೀ ಅಂತಿದ್ದ.. ಹೀಗೆ ಅದೊಂದ್ ಮಹಿಳೆಗೂ ಹುಡ್ಗೀನ ನೋಡ್ಕೊಡಿ ಅಂದಿದ್ದ.. ಮದ್ವೆ ಮಾಡಿಸ್ತೀನಿ ಅಂದಿದ್ದ ಆಕೆ ತನ್ನ ಗ್ಯಾಂಗ್ ಸಮೇತ ಸುಲಿಗೆ ಮಾಡಿದ್ಳು.. ಆ ಖತರ್ನಾಕ್ ಗ್ಯಾಂಗ್ ಅನ್ನ ಪೊಲೀಸ್ರು ಜೈಲಿಗಟ್ಟಿದ್ದಾರೆ..
Neck Pain: ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!
ಅಂದ್ಹಾಗೆ ಈ ಘಟನೆ ನಡೆದಿದ್ದ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮೈತ್ರಿ ಸರ್ಕಲ್ ಬಳಿ.. ರ್ಯಾಪಿಡೋ ಓಡಿಸ್ತಿದ್ದ 34 ವರ್ಷದ ಸುರೇಂದ್ರ ಕುಮಾರ್ ಎಂಬಾತನಿಗೆ ಮದ್ವೆ ಆಗಿರ್ಲಿಲ್ಲ.. ಇತ್ತೀಚೆಗೆ ರ್ಯಾಪಿಡೋ ಬುಕ್ ಮಾಡಿದ್ದ ಮಹಿಳೆಯೊಬ್ಬ ಮಂಜುಳಾ ಎಂಬಾಕೆ ಪರಿಚಯ ಆಗಿದ್ಳು.. ಆಕೆ ಬಳಿಯೂ ಸುರೇಂದ್ರ ಕುಮಾರ್ ಮಾತಿಗೆ ಮಾತು ಶುರು ಮಾಡಿ ಮದ್ವೆಗೆ ಹೆಣ್ಣು ಇದ್ರೆ ನೋಡಿ ಎಂದಿದ್ದ.. ಈ ವೇಳೆ ಒಕೆ ಅಂದಿದ್ಳು..
ಎರಡು ಮೂರು ದಿನದ ನಂತರ ಹೆಬ್ಬಾಳದ ಮೈತ್ರಿ ಸರ್ಕಲ್ ಬಳಿ ಹೋಗು ಒಂದು ಹುಡುಗಿ ಇದಾಳೆ ಮಾತಾಡ್ಕೊಂಡು ಮುದುವೆ ಫಿಕ್ಸ್ ಮಾಡ್ಕೋ ಅಂತಾ ಹೇಳಿದ್ಲು.. ಹುಡುಕಿ ಸಾಕಾಗಿದ್ದ ಸುರೇಂದ್ರನಿಗೆ ಇಷ್ಟು ಸಾಕಿತ್ತು.. ಕೂಡಲೇ ಮೈತ್ರಿ ಸರ್ಕಲ್ ಗೆ ಹೋಗಿದ್ದಾಗ ಯುವತಿ ಕೂಡ ಇರ್ತಾರೆ.. ಬನ್ನಿ ಮನೆಗೆ ಮಾತಾಡೋಣ ಅಂತಾ ಕರ್ಕೊಂಡ್ ಕೂಡ ಹೋಗ್ತಾಳೆ.. ಆದ್ರೆ ಅಲ್ಲಿ ಹೋಗಿ ಮಾತುಕತೆಗೆ ಅಂತಾ ಕೂತ ಐದು ನಿಮಿಷಕ್ಕೆ ಪೊಲೀಸ್ರ ವೇಷದಲ್ಲಿ ಬಂದು ವೇಷ್ಯವಾಟಿಕೆ ಮಾಡ್ತಿದ್ಯಾ ಅಂತಾ ಹೆದರಿಸಿ 50 ಸಾವಿರ ಹಾಕಿಸಿಕೊಂಡಿದ್ದಾರೆ..
ಯಾವಾಗ ತಾನು ಟ್ರ್ಯಾಪ್ ಗೆ ಒಳಗಾದೆ ಅಂತಾ ಗೊತ್ತಾಯ್ತೋ ಸೀದಾ ಸುರೇಂದ್ರ ಕುಮಾರ್ ಹೆಬ್ಬಾಳ ಪೊಲೀಸ್ರಿಗೆ ಹೋಗಿ ಕಂಪ್ಲೆಂಟ್ ಕೊಟ್ಟಿದ್ದಾನೆ.. 24 ಗಂಟೆಯಲ್ಲೇ ಓರ್ವನನ್ನ ಬಂಧಿಸಿದ್ದ ಪೊಲೀಸ್ರು ನಂತರ ಒಟ್ಟು ಆರು ಜನ್ರನ್ನ ಬಂಧಿಸಿದ್ದಾರೆ.. ಹನಿ ಟ್ರ್ಯಾಪ್ ಮಾಡಿದ್ದ ಇಡೀ ಗ್ಯಾಂಗ್ ಅನ್ನ ಪೊಲೀಸ್ರು ಜೈಲಿಗಟ್ಟಿದ್ದು.. ಈ ಮುಂಚೆ ಕೂಡ ಇಂತಹದ್ದೇ ಕೆಲಸ ಮಾಡಿದ್ರು ಅನ್ನೋದು ಗೊತ್ತಾಗಿದೆ.. ಸೋ ಯಾರ ಜೊತೆ ಏನಾದ್ರು ವ್ಯವಹಾರ ಮಾಡೋ ಮುನ್ನ ಹುಷಾರಾಗಿರಿ..