ಬಾಗಲಕೋಟೆ: ಪ್ರಧಾನ ಮಂತ್ರಿ ಏನಾದರೂ ಹೇಳಲಿ, ನಾವು ನಮ್ಮ ಜನರ ಕೆಲಸ ಮಾಡುತ್ತಾ ಇರತ್ತೇವೆ. ಗ್ಯಾರಂಟಿ ಯೋಜನೆಯಿಂದಾಗಿ ಬಿಜೆಪಿ ಪಕ್ಷದವರಿಗೆ ನಡುಕ ಶುರುವಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ತಿಳಿಸಿದ್ದಾರೆ. ಸಿದ್ದರಾಮಯ್ಯ ಎಷ್ಟ ದಿನ ಸಿಎಂ ಇರ್ತಾರೆ ಗೊತ್ತಿಲ್ಲ, ಸಿಎಂ – ಡಿಸಿಎಂ ಸೇರಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು,
ನಮ್ಮ ಸರ್ಕಾರ ಅಲುಗಾಡಿಸಲಿಕ್ಕೆ ಆಲೋಚನೆ ಮಾಡಿದರು. ಆ ರೀತಿ ಮೋದಿ ಅವರ ಹೇಳಿಕೆ ಇರಬಹುದು ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತೆ. ಪ್ರಧಾನಿ ಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ ಎಂದರು. ಇವತ್ತು ಮುಖ್ಯವಾಗಿ ಆಗಬೇಕಿರುವುದು ಜನಗಳ ಕಾರ್ಯ. ನಾವು ಜನಗಳ ಕೆಲಸದ ಬಗ್ಗೆ ಗಮನ ಹರಿಸಿದ್ದೇವೆ. ಬಿಜೆಪಿಯವರು ಆಪರೇಷನ್ ಮಾಡ್ತಾರೋ, ಇನ್ನೊಂದ ಮಾಡ್ತಾರೋ ಮಾಡಲಿ.
ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ರಾಜ್ಯದ ಜನರ ಆಶಿರ್ವಾದ ನಮಗಿದೆ. ಜನರ ಕೆಲಸ ಕಾರ್ಯ ನಾವು ಮಾಡಬೇಕು. ಪ್ರದಾನಿ ಮೋದಿಯವರು ಏನಾದ್ರೂ ಹೇಳಲಿ. ನಾವು ನಮ್ಮ ಜನರ ಕೆಲಸ ಮಾಡುತ್ತೇವೆ. ಬಿಜೆಪಿ ಯವರು ಅಂಬಾನಿ-ಅದಾನಿ ಅಂಥವರಿಗೆ ಅನುಕೂಲ ಮಾಡಿದ್ದಾರೆ. ಆದರೆ ನಾವು ನಮ್ಮ ರಾಜ್ಯದ ಸಾಮಾನ್ಯ ಜನ ಅಂಬಣ್ಣ-ತಿಮ್ಮಣ್ಣನಿಗೆ ಗ್ಯಾರೆಂಟಿ ಕೊಟ್ಟು ಸಹಾಯ ಮಾಡಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯ ಸಹಿಸಲಿಕ್ಕೆ ಆಗದೆ ಮೋದಿ ಕಿಡಿಗೇಡಿ ಮಾತುಗಳನ್ನ ಆಡುತ್ತಿದ್ದಾರೆ ಎಂದು ಟಾಂಗ್ ನೀಡಿದರು