ಬೆಂಗಳೂರು:- ಹೈಗ್ರೌಂಡ್ಸ್ ಠಾಣಾ ಪೊಲೀಸರು ಕಾರ್ಯಚರಣೆ ನಡೆಸಿ ಸಿಗ್ನಲ್ಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಬಂಧಿತರು. ಆರೋಪಿಗಳಿಂದಒಟ್ಟು ಐದು ಲಕ್ಷ ಮೌಲ್ಯದ 80 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಆರೇಳು ತಿಂಗಳಿಂದ ನಗರದ ಹಲವು ಜಂಕ್ಷನ್ಗಳಲ್ಲಿ ಸಿಗ್ನಲ್ಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಕಳ್ಳತನವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬರೋಬ್ಬರಿ 120 ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಲನವಲನಗಳು ಪತ್ತೆಯಾಗಿವೆ.
ಅದರಂತೆ, ಆರೋಪಿಗಳ ಗುರುತು ಪತ್ತೆಹಚ್ಚಿದ ಹೈಗ್ರೌಂಡ್ಸ್ ಪೊಲೀಸರು, ಆರೋಪಿಗಳಾದ ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಎಂಬವರನ್ನು ಬಂಧಿಸಿ ಕಳ್ಳತನ ಮಾಡಿದ್ದ 80 ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾ