ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಒಂದೇ ರಾತ್ರಿಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿವೆ. ಸಿಸಿಟಿವಿಯಲ್ಲಿ ಕಳ್ಳರು ರಾಜರೋಶವಾಗಿ ಲಾರಿಗಳ ಬ್ಯಾಟರಿ ಕದ್ದು ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸೆರೆಯಾಗಿವೆ.
ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗಳ 12 ಬ್ಯಾಟರಿ, ಹಂಸ ಚಿಕನ್ ಸೆಂಟರ್ ಬಳಿ 4 ಬ್ಯಾಟರಿ, ಪಾಲನಜೋಗಿಹಳ್ಳಿ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯಲ್ಲಿದ್ದ ಸುಮಾರು 150 ಲೀ. ಡೀಸೆಲ್ ಕಳವು ಮಾಡಲಾಗಿದೆ. ನಗರದ ಬಹುತೇಕ ಕಡೆ ರಾತ್ರಿ ವೇಳೆ ಕಾರು, ಲಾರಿ ಇತರ ವಾಹನಗಳನ್ನು ಮನೆ ಹೊರಗೆ, ರಸ್ತೆಬದಿ ನಿಲ್ಲಿಸಲಾಗುತ್ತದೆ. ಕಾರಿನಲ್ಲಿ ಬಂದ ಮೂವರು ಕಳ್ಳತನ ನಡೆಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿವೆ. ಕಬ್ಬಿಣದ ಸರಳು, ಇತರೆ ಆಯುಧಗಳೊಂದಿಗೆ ಬಂದಿರುವ ಕಳ್ಳರು ಲಾರಿಗಳ ಬ್ಯಾಟರಿಗಳಿಗೆ ಅಳವಡಿಸಿದ ಕಬ್ಬಿಣದ ಪಟ್ಟಿಯನ್ನು ಕಬ್ಬಿಣದ ರಾಡುಗಳಿಂದ ಮುರಿದು ಹಾಕಿದ್ದಾರೆ.
ಇದಲ್ಲದೇ ರಾತ್ರಿ ವೇಳೆ ಕೆಲಸಕ್ಕೆ ಓಡಾಡುವ ಮಹಿಳೆಯರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕಿದೆ. ಇನ್ನೂ ರಾತ್ರಿ ಆದರೆ ಕಳ್ಳರಿಗೆ ಯಾವ ಭಯವಿಲ್ಲದ ರೀತಿ ಆಗಿದೆ. ಹೀಗಾಗಿ ರಾತ್ತಿ ಪಾಳಯದಲ್ಲಿ ಪೊಲೀಸ್ ಬೀಟ್ ಹೆಚ್ಚಳ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.