ಬೆಂಗಳೂರು : ಹಾಲ್ಮಾರ್ಕ್ಗೆ ಎಂದು ಕೊಡುತ್ತಿದ್ದ ಆಭರಣಗಳಲ್ಲಿ ಚಿನ್ನ ಎಗರಿಸುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಂತ ಹಂತವಾಗಿ ಬರೋಬ್ಬರಿ ಎರಡೂವರೆ ಕೆ.ಜಿ ಚಿನ್ನಾಭರಣ ದೋಚಿದ್ದ ಕೆಲಸಗಾರರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಹಲಸೂರ್ ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮಹಬೀರ್ ಬುರ್ಜರ್, ಮಣೀಶ್ ಪ್ರಜಾಪತ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಹಾಲ್ ಮಾರ್ಕ್ ಹಾಕಿ ಕೊಡುವ ಸೆಂಟರ್ ನಲ್ಲಿ ಮಾಡುತ್ತಿದ್ದರು. ನಗರದ ಹಲವು ಜ್ಯುವೆಲ್ಲರಿ ಅಂಗಡಿಗಳಿಂದ ಈ ಸೆಂಟರ್ಗೆ ಹಾಲ್ಮಾರ್ಕ್ ಹಾಕಿಸಲು ಕೆಜಿಗಟ್ಟಲೇ ಚಿನ್ನಾಭರಣ ಬರುತ್ತಿತ್ತು. ಹೀಗೆ ಹಾಲ್ ಮಾರ್ಕಿಂಗ್ಗೆ ಬರುತ್ತಿದ್ದ ಚಿನ್ನಾಭರಣಗಳಲ್ಲಿ ಸ್ವಲ್ಪ ಸ್ವಲ್ಪವೇ ಕದಿಯುತ್ತಿದ್ದರು ಎನ್ನಲಾಗಿದೆ.
TA ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ನ ಚಿನ್ನ ಕಳುವು: ಕೇಸ್ ದಾಖಲು!
ಕಳೆದ ಮೂರು ತಿಂಗಳಲ್ಲಿ ಹಂತ ಹಂತವಾಗಿ ಎರಡೂವರೆ ಕೆಜಿ ಚಿನ್ನ ಕದ್ದು ಪರಾರಿಯಾಗಿದ್ದರು. ತಾವು ಕದ್ದ ಚಿನ್ನದ ಸಮೇತ ಸೀದಾ ರಾಜಸ್ಥಾನಕ್ಕೆ ಎಸ್ಕೇಪ್ ಆಗಿದ್ದಾರೆ. ಸದ್ಯ ಹಲಸೂರು ಗೇಟ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ. ಸದ್ಯ ಖದೀಮರು ತನಿಖೆ ವೇಳೆ ಚಿನ್ನವನ್ನು ಸಹ ನೀಡಿಲ್ಲ, ಹೀಗಾಗಿ ಗೋಲ್ಡ್ ರಿಕವರಿ ಮಾಡಲು ಪೊಲೀಸರು ಮುಂದಾಗಿದ್ದಾರೆ.