ಬೆಂಗಳೂರು:-ರಾಜಕೀಯ ಅಂದ್ರೇನೇ ಹೀಗೆ ಯಾರು ಯಾವಾಗ ಯಾವ ದಾಳ ಉರುಳಿಸುತ್ತಾರೆ ಅನ್ನೋದೇ ತಿಳಿಯೋದಿಲ್ಲ ಬೆಳಗಾಗುವುದರೊಳಗೆ ಶತ್ರುಗಳು ಮಿತ್ರರಾಗುತ್ತಾರೆ ಮಿತ್ರರು ಶತ್ರುಗಳಾಗುತ್ತಾರೆ ಅದೇ ರೀತಿ ಈ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವಲಸೆ ಹೋಗೋದು ಮತ್ತೆ ಸ್ವಪಕ್ಷದ ಕಡೆ ಮುಖ ಮಾಡೋದು ಎಲ್ಲವೂ ಮಾಮೂಲಿ ಈ ಲಿಸ್ಟ್ ಗೆ ಸೇರ್ತಾರಾ ದಾಸರಹಳ್ಳಿ ಮಾಜಿ ಶಾಸಕ ಆರ್ ಮಂಜುನಾಥ್ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ…
2023ರ ವಿಧಾನಸಭಾ ಚುನಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಆರ್ ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ ಎಂಬ ಚರ್ಚೆ ಕ್ಷೇತ್ರದಲ್ಲೆಡೆ ಜೋರಾಗಿದೆ
ಅಂದ ಹಾಗೆ ಆರ್ ಮಂಜುನಾಥ್ ಮೂಲತಃ ಕಾಂಗ್ರೆಸ್ನವರು ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು ಪ್ರತಿಸ್ಪರ್ಧಿ ಮುನಿರಾಜು ವಿರುದ್ಧ ರೋಚಕ ಜಯ ಸಾಧಿಸಿ ದಾಸರಹಳ್ಳಿಯಲ್ಲಿ ಜೆಡಿಎಸ್ ಬಾವುಟ ಹಾರಿಸಿದ್ದ ಮಂಜುನಾಥ್ 2023ರ ಚುನಾವಣೆಯಲ್ಲಿ ಎಸ್ ಮುನಿರಾಜು ವಿರುದ್ಧ ಸೋಲು ಕಂಡಿದ್ದರು. ಈ ಮಧ್ಯ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುದ್ದಿ ಹೊರ ಬೀಳುತ್ತಿದ್ದಂತೆ ಅಸಮಾಧಾನಗೊಂಡಿದ್ದ ಆರ್ ಮಂಜುನಾಥ್ ಮತ್ತೆ ಸ್ವಪಕ್ಷದ ಕಡೆಗೆ ಮುಖ ಮಾಡಿದ್ದಾರೆ
ಈಗಾಗಲೇ ಡಿಕೆ ಶಿವಕುಮಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದು ಇದೇ ನವಂಬರ್ 15ನೇ ತಾರೀಕು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ
ಒಟ್ಟಾರೆ ಡಿಕೆ ಶಿವಕುಮಾರ್ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನೇ ಮಾಡಿಕೊಳ್ಳುತ್ತಿದ್ದು ದೊಡ್ಡ ದೊಡ್ಡ ನಾಯಕರನ್ನೇ ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿರುವುದಂತೂ ನಿಜ…