ಮಂಡ್ಯ : ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಯುವತಿ ಸ್ಮಶಾನ ಸೇರಿದ್ದಾಳೆ. ಮಂಡ್ಯದ ಮಳವಳ್ಳಿಯ ಹೆಚ್ ಬಸಾಪುರ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ಮಳವಳ್ಳಿಯ ಬಾಳೆಹೊನ್ನಿಗ ಗ್ರಾಮದ ಶರಣ್ಯ 26 ಮೃತ ದುರ್ದೈವಿ.
ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಶರಣ್ಯಗೆ ಮದುವೆ ನಿಶ್ಚಯವಾಗಿತ್ತು. ಆದರೆ ವಿಧಿವಿಪರ್ಯಾಸ 20 ದಿನಗಳಲ್ಲಿ ಹಸಮಣೆ ಏರಬೇಕಿದ್ದ ಶರಣ್ಯ ಸಾವಿನ ಮನೆ ಸೇರಿದ್ದಾಳೆ. ಶರಣ್ಯ ಗ್ರಾಮದಿಂದ ಹಲಗೂರು ಕಡೆ ಹೊರಟಿದ್ದಳು. ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಶರಣ್ಯ ತಲೆಗೆ ತೀವ್ರ ಪೆಟ್ಟು ಬಿದಿದ್ದೆ. ಅಧಿಕ ರಕ್ತ ಸ್ತ್ರಾವದಿಂದಾಗಿ ಶರಣ್ಯ ಸ್ಥಳದಲ್ಲೇ ಅಸುನೀಗಿದ್ದಾಳೆ. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.