ಬೆಂಗಳೂರು:-ಇದೊಂತರ ಡಿಫ್ರೆಂಟ್ ಸ್ಟೋರಿ.. ಅಂಕಲ್ ಮತ್ತು ಯುವತಿಯ ನಡುವಿನ ಒಂದೇ ದಿನದ ಲವ್ ಸ್ಟೋರಿ.. ಯುವತಿ ಪ್ರಪೋಸಲ್ ಅಕ್ಸೆಪ್ಟ್ ಮಾಡಿದ್ಳು ಅಂತಾ ಖುಷಿಯಾಗಿ ಆಕೆನ ಭೇಟಿ ಮಾಡೋಕೆ ಹೋಗಿದ್ದ ಅಂಕಲ್ ಗೆ ಶಾಕ್ ಕಾದಿತ್ತು.. ಪಾರ್ಕ್ ನಲ್ಲಿ ಲವ್ ಸೀನ್ ಶುರುವಾಗುತ್ತೆ ಅಂತಾ ಅಂದ್ಕೊಂಡಿದ್ದ ಅಂಕಲ್ ಗೆ ತಾನು ಮಾಡಿದ್ದ ಕೆಲಸಕ್ಕೆ ಉಲ್ಟಾ ಹೊಡೆದು ಕ್ರೈಂ ಸೀನ್ ಕ್ರಿಯೇಟ್ ಆಗಿತ್ತು.. ಅಷ್ಟಕ್ಕೂ ಏನಿದು ಅಂಕಲ್ ಸ್ಟೋರಿ ಅಂತೀರಾ ಹೇಳ್ತೀವಿ ನೋಡಿ..
ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್: ಬಿಜೆಪಿ ಶಾಸಕನಿಗೆ ಪರಪ್ಪನ ಅಗ್ರಹಾರ ಜೈಲೇ ಗಟ್ಟಿ!
58ವರ್ಷದ ಅಂಕಲ್ ಗೆ ಲವ್ ಮಾಡ್ತೀನಿ ಅಂತಾ ಒಪ್ಪಿಕೊಂಡಿದ್ದ ಯುವತಿ.. ಮಾರನೇ ದಿನವೇ ಪಾರ್ಕ್ ಗೆ ಕರೆಸಿಕೊಂಡು ಸ್ನೇಹಿತನ ಕೈಲಿ ಚಾಕುವಿನಿಂದ ಹಲ್ಲೆ ಮಾಡಿಸಿರೋ ಘಟನೆ ಬೆಂಗಳೂರಿನ ಸುದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಯುವತಿ ರಾತ್ರಿ ಟೈಮಲ್ಲಿ ಪಾರ್ಕ್ ಗೆ ಕರೆದ್ಳು ಅಂತಾ ಚಪಲದಲ್ಲಿ ಹೋಗಿದ್ದ ಅಂಕಲ್ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾನೆ..
ಅಂದ್ಹಾಗೆ ಈ ಘಟನೆ ನಡೆದಿದ್ದು ಬಿಟಿಎಮ್ ಲೇಔಟ್ ನ ಪಾರ್ಕ್ ವೊಂದರ ಬಳಿ.. ಜಯನಗರದಲ್ಲಿ ಬಟ್ಟೆ ಅಂಗಡಿ ಇಟ್ಕೊಂಡಿದ್ದ ಈ 58ವರ್ಷದ ಹಿತೇಂದ್ರ ಕುಮಾರ್ ಹೇ ನೋಡಿ ಯುವತಿಯನ್ನ ಲವ್ ಮಾಡ್ತೀನಿ ಅಂತಾ ಹೋಗಿ ಫಜೀತಿಗೆ ಸಿಕ್ಕಿಬಿದ್ದಾತ.. ಅಂದ್ಹಾಗೆ ಈ ಹಿತೇಂದ್ರ ಕುಮಾರ್ ಒಬ್ಬ ಬ್ಯುಸಿನೆಸ್ ಮೆನ್.. ಒಳ್ಳೆ ಇನಕಮ್ ಇತ್ತು.. ಹೆಣ್ತಿ ಮಕ್ಕಳು.. ಎಲ್ಲವೂ ಇತ್ತು.. 58 ವರ್ಷ ಆದ್ರೂ ಚಪಲ ಮಾತ್ರ ಕಮ್ಮಿ ಆಗಿರ್ಲಿಲ್ಲ.. ತನ್ನ ಬಟ್ಟೆ ಅಂಗಡಿಗೆ ಕಲಸಕ್ಕೆ ಅಂತಾ ಸೇರಿದ್ದ ಯುವತಿಯ ಹಿಂದೆ ಬಿದ್ದಿದ್ದ.. ಪ್ರತಿ ದಿನ ಆಕೆಯನ್ನ ಬೇರೆ ರೀತಿಯಲ್ಲಿ ಮಾತಾಡಿಸೋದು.. ಕಾಲ್ ಮಾಡೋದು.. ಅಶ್ಲೀಲ ವಿಡಿಯೋಗಳನ್ನ ಕಳಿಸೋದು.. ಮಾಡ್ತಿದ್ದ.. ಈತನ ಕಾಟಕ್ಕೆ ಬೇಸತ್ತಿದ್ದ ಯುವತಿ ಕೊನೆಗೆ ಆತನ ಬಟ್ಟೆ ಅಂಗಡಿಯಲ್ಲಿ ಕೆಲಸ ಬಿಟ್ಟಿದ್ಳು.. ಆದ್ರೂ ಯುವತಿಯ ಮೇಲಿನ ಮೋಹ ಬಿಡದ ಅಂಕಲ್ ಪದೇ ಪದೇ ಆಕೆಗೆ ಕಾಲ್ ಮಾಡಿ ಕಾಟ ಕೊಡ್ತಿದ್ನಂತೆ..
ಮತ್ತೆ ವಿಡಿಯೋಗಳನ್ನ ಕಳಿಸ್ತಿದ್ನಂತೆ.. ಯಾವಾಗ ಈತನ ಕಾಟ ಮಿತಿ ಮೀರಿತೋ ಯುವತಿ ತನ್ನ ಗೆಳೆಯನ ಬಳಿ ಎಲ್ಲಾ ನೋವು ಹೇಳಿಕೊಂಡಿದ್ಳು.. ನಂತರ ಆ ಅಂಕಲ್ ಗೆ ಬುದ್ದಿ ಕಲಿಸೋಕೆ ಮುಂದಾ ಯುವತಿ ಆಡಿದ್ದು ಲವ್ ನಾಟಕ.. ಕಳೆದ 14ನೇ ತಾರೀಖು ಯುವತಿಗೆ ಕಾಲ್ ಮಾಡಿದ್ದ ಅಂಕಲ್ ಹಿತೇಂದ್ರ ಕುಮಾರ್ ಆಕೆಯನ್ನ ಪ್ರೀತಿಸು ಅಂತಾ ಕೇಳಿಕೊಂಡಿದ್ದ.. ಪಾರ್ಕ್ ಹತ್ರ ಬಾ ಮಾತಾಡೋಣ ಅಂತಾ ಕರೆದಿದ್ದ.. ಬಿಟಿಎಮ್ ಲೇಔಟ್ ನ ಈ ಪಾರ್ಕ್ ನಲ್ಲಿ 14ನೇ ತಾರೀಖು ಅಂಕಲ್ ನ ಮೀಟ್ ಆಗಿದ್ದ ಯುವತಿ ಆತನ ಪ್ರೀತಿಯನ್ನ ಒಪ್ಪಿಕೊಂಡಹಾಗೆ ನಾಟಕ ಆಡಿದ್ಳು. ಮರು ದಿನ ಅಂದ್ರೆ 15ನೇ ತಾರೀಖು ಅಂಕಲ್ ಗೆ ಕರೆ ಮಾಡಿ ರಾತ್ರಿ 10ಗಂಟೆ ಸುಮಾರಿಗೆ ಮಾತಾಡ್ವೇಕು ಬನ್ನಿ ಅಂತಾ ಮತ್ತೆ ಪಾರ್ಕ್ ಗೆ ಕರೆದಿದ್ಳು.. ಅತ್ತ ತನ್ನ ಗೆಳೆಯ ಸಿದ್ದುಗೂ ಏನಾದ್ರೂ ಆಗ್ಬೋದು ಅಂತಾ ಕರೆಸಿಕೊಂಡಿದ್ಳು.. ಇನ್ನು ಮೊದ್ಲೇ ಲವ್ ಒಪ್ಕೊಂಡಿದ್ದಾಳೆ.. ಮೀಟ್ ಮಾಡೋಕ್ ಬೇರೆ ಕರ್ದಿದ್ದಾಳೆ ಅಂತಾ ಜೋಶ್ ಅಲ್ಲಿದ್ದ ಅಂಕಲ್ ಪಾರ್ಕ್ ಗೆ ಬಂದು ಆಕೆಯ ಪಕ್ಕ ಕುಳಿತುಕೊಂಡಿದ್ದಾತ ಸುಮ್ಮನಿರದೆ ಯುವತಿಯ ಮೈಕೈ ಮುಟ್ಟಿದ್ನಂತೆ.. ಕೂಡಲೇ ಅಲ್ಲಿ ಜಗಳ ಉಂಟಾಗಿದ್ದು ಅಲ್ಲೇ ಇದ್ದ ಯುವತಿಯ ಗೆಳತಿ ಸಿದ್ದು ತಾನು ತಂದಿದ್ದ ಚಾಕುವಿನಿಂದ ಅಂಕಲ್ ಗೆ ಇರಿದು ಎಸ್ಕೇಪ್ ಆಗಿದ್ದಾನೆ.
ಇನ್ನು ಮಾಹಿತಿ ಬಂದ ಕೂಡಲೇ ತನಿಖೆ ಶುರು ಮಾಡಿದ್ದ ಸುದ್ದುಗುಂಟೆ ಪಾಳ್ಯ ಪೊಲೀಸರು ಚಾಕು ಇರಿದಿದ್ದ ಸಿದ್ದು ಹಾಗೂ ಯುವತಿಯನ್ನ ಬಂಧಿಸಿ ತನಿಖೆ ನಡೆಸ್ತಿದ್ದಾರೆ.. ಮತ್ತೊಂದ್ಕಡೆ ಅಂಕಲ್ ಆಸ್ಪತ್ರೇಲಿ ಚಿಕಿತ್ಸೆ ಪಡೀತಿದಾನೆ.. ತನಿಖೆ ವೇಳೆ ಅಂಕಲ್ ನ ಚಪಲದ ಬಗ್ಗೆ ಯುವತಿ ನೋವು ತೋಡಿಕೊಂಡಿದ್ದು ಕೇಸ್ ನಲ್ಲಿ ವಿಕ್ಟಿಮ್ ಆದ್ರೂ ಅಂಕಲ್ ಗೆ ಕಾನೂನು ಕಂಟಕ ಎದುರಾಗೋ ಸಾಧ್ಯತೆ ಇದೆ.