ಹೊಂಬಾಳೆ ಫಿಲ್ಮ್ಸ್ನ ಆಕ್ಷನ್-ಪ್ಯಾಕ್ಡ್ ಬ್ಲಾಕ್ಬಸ್ಟರ್ “ಸಲಾರ್; ಸೀಸ್ಫೈರ್” ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್ಸ್ಟಾರ್ನಲ್ಲಿ (ಹಿಂದೆ ಡಿಸ್ನಿ+ ಹಾಟ್ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ.
ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್ಗಳಿಂದಲೇ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದ ಈ ಸಿನಿಮಾ, ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿ ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗಿದೆ. ಅಂದಿನಿಂದಲೂ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸಲಾರ್ ಸಿನಿಮಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಜತೆಗೆ ಸಲಾರ್ ಚಿತ್ರದ ಆಯ್ದ ಕಟ್ಟಾ 366 ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೂ ನೀಡಿದೆ ಹೊಂಬಾಳೆ ಫಿಲಂಸ್.
ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಹೊಂಬಾಳೆ ಫಿಲಂಸ್, “#ಸಲಾರ್ ಬಿರುಗಾಳಿ ಮುಂದುವರೆದಿದೆ.. ಒಂದು ವರ್ಷದ ನಂತರವೂ @JioHotstarನಲ್ಲಿ ಬೆಂಕಿ ಇನ್ನೂ ಉರಿಯುತ್ತಿದೆ.. ಮುಂದಿನ ಅಧ್ಯಾಯ ತೆರೆದುಕೊಳ್ಳುವವರೆಗೆ… ಸಲಾರ್ ಚೈತನ್ಯವನ್ನು ಜೀವಂತವಾಗಿರಿಸಿಕೊಳ್ಳಿ! ಎಂದಿದೆ. ಇದರ ಜತೆಗೆ ನಟ ಪ್ರಭಾಸ್ ಈ ಖುಷಿಯ ಬಗ್ಗೆ ಮಾತನಾಡಿದ್ದಾರೆ. ” ಜಿಯೋ ಹಾಟ್ಸ್ಟಾರ್ನಲ್ಲಿ ಸಲಾರ್ಗೆ ನೀವು ತೋರಿದ ಪ್ರೀತಿ ಖುಷಿ ನೀಡಿದೆ. ಕಾನ್ಸಾರ್ಗೆ ಶೀಘ್ರದಲ್ಲಿ ಮತ್ತೆ ಕಾಲಿಡೋಣ” ಎಂದಿದ್ದಾರೆ.
ಇದು ಕೇವಲ ಆರಂಭ – ಸಲಾರ್ 2 ಗಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ, ಅಲ್ಲಿ ದಂತಕಥೆ ಮುಂದುವರಿಯುತ್ತದೆ. ಆಕ್ಷನ್ ತೀವ್ರಗೊಳ್ಳುತ್ತದೆ ಮತ್ತು ಸಾಹಸಗಾಥೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪುತ್ತದೆ. ಮುಂದಿನ ಅಧ್ಯಾಯವು ಹಿಂದೆಂದೂ ಕಾಣದ ಮಿತಿಗಳನ್ನು ಮೀರಿದ ಸಿನಿಮೀಯ ಅನುಭವವನ್ನು ನೀಡುತ್ತದೆ ಎಂದಿದೆ ಹೊಂಬಾಳೆ ಫಿಲಂಸ್.