ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ವಿರುದ್ಧ ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ಕುರಿತು ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ದೂರು ನೀಡಿರುವ ಮಹಿಳೆಗೆ ಮಾನಸಿಕ ಅಸ್ವಸ್ತತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ, ಠಾಣೆಯಲ್ಲಿ ಕೈಬರಹದ ಪ್ರತಿ ಬದಲಿಗೆ ಟೈಪ್ ಮಾಡಿರುವ ಪ್ರತಿಯನ್ನು ನೀಡಿದ್ದಾರೆ, ಇದು ಮಾಜಿ ಮುಖ್ಯಮಂತ್ರಿಗಳ ವಿರುದ್ದ ನೀಡಿರುವ ಪ್ರಕರಣವಾಗಿದೆ. ಜೊತೆಗೆ ಒಬ್ಬ ಮಹಿಳೆ ದೂರು ನೀಡಿರುವ ಕಾರಣ ಇದೊಂದು ಸೂಕ್ಷ ಪ್ರಕರಣವಾಗಿದೆ. ತನಿಖೆ ನಡೆದು ವರದಿ ಬಂದ ನಂತರವಷ್ಟೆ ಮಾಹಿತಿ ಬಹಿರಂಗ ಪಡಿಸಲಾಗುವುದು ಎಂದರು.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯವಿದ್ದರೇ ಮಹಿಳೆಯ ಕುಟುಂಬಕ್ಕೆ ಪೊಲೀಸರು ರಕ್ಷಣೆ ನೀಡಲಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೂ ಉದ್ದೇಶಪೂರ್ವಕವಾಗಿ ದೂರು ದಾಖಲಿಸಿದ್ದಾರಾ ಅಥವಾ ದುರುದ್ದೇಶ ಪೂರಕವಾಗಿದೆಯಾ ಎನ್ನುವುದರ ತನಿಖೆ ನಡೆಯಲಿದೆ. ತನಿಖೆ ನಂತರ ಆರೋಪ ಸಾಬೀತಾದರೇ ಕಾನೂನು ಪ್ರಕಾರ ಕ್ರಮಕ್ಕೆ ಸೂಚಿಸಲಾಗುವುದು ಎಂದು ಅವರ ಹೇಳಿದರು.