ಬಳ್ಳಾರಿ: ರೈತರ ಜಮೀನಿನಲ್ಲಿ ಅಳವಡಿಸಿದ ಖಾಸಗಿ ಕಂಪನಿಯವಿಂಡ್ ಫ್ಯಾನ್ ಹೊತ್ತಿ ಉರಿದ ಘಟನೆ ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ವೀರೇಶ್, ಕುಮಾರಸ್ವಾಮಿ ಹಾಗೂ ರಾಮಾಂಜನೇಯ ಎನ್ನುವವರ ಜಮೀನಿನಲ್ಲಿ ಖಾಸಗಿ ಕಂಪನಿ ಅಳವಡಿಸಿದ್ದ ವಿಂಡ್ ಫ್ಯಾನ್ನಲ್ಲಿತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ವಿಂಡ್ ಫ್ಯಾನ್ ಹೊತ್ತಿ ಉರಿದಿದೆ. ಬೆಂಕಿಯಿಂದಾಗಿ ಜಮೀನಿನಲ್ಲಿ ದಟ್ಟ ಹೊಗೆ ಆವರಿಸಿದೆ. ದಟ್ಟ ಹೊಗೆ ಕಂಡು ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಚೋರನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.