ಚಳಿಗಾಲ ಶುರುವಾಗ್ತಾ ಇದ್ದ ಹಾಗೆ ಮಕ್ಕಳಿಗೆ ಒಂದಿಲ್ಲ ಒಂದು ಖಾಯಿಲೆ ಕೂಡ ಜತೆ ಜತತೆ ಬರುತ್ತದೆ . ಕಳೆದ ಎರಡು ಮೂರು ದಿನಗಳಿಂದ ಮಾತ್ರ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಮಕ್ಕಳನ್ನು ಹವಾಮಾನ ವೈಪರೀತ್ಯದಿಂದ ಇನ್ನಷ್ಟು ಬೆಚ್ಚಗಿಡಿಸಬೇಕಾಗಿದೆ. ಇದಕ್ಕಾಗಿ ಮೆಡಿಕವರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಆನಂದ್ ಪಾಟೀಲ್ ರವರು ಮಕ್ಕಳಿಗೆ ಚಳಿಗಾಲದಲ್ಲಿ ಎದುರಾಗುವ ಸಾಮಾನ್ಯ ಖಾಯಿಲೆಯಿಂದ ದೂರವಿಡಲು ಏನೆಲ್ಲಾ ಮಾಡಬೇಕೆಂದು ಟಿಪ್ಸ್ ನೀಡಿದ್ದಾರೆ .
ಮಕ್ಕಳನ್ನು ಬೆಚ್ಚಗಿರಿಸಿ : ಮಕ್ಕಳನ್ನು ಬೆಚ್ಚಗಿಡಿಸುವ ಬಟ್ಟೆ ಹಾಕೋದನ್ನು ಮರೀಬೇಡಿ .ಸ್ವೆಟರ್ , ಸ್ವಾಕ್ಸ್ , ಕ್ಯಾಪ್ ಹಾಗೂ ಕೈಗೆ ಗ್ಲೌಸ್ ಹಾಕಿಸಿ. ಮಕ್ಕಳನ್ನು ಬೆಚ್ಚಗಿಡಬೇಕೆಂಬ ಕಾರಣಕ್ಕೆ ಬೆವರು ಬರುವಷ್ಟು ಜಾಸ್ತಿ ಬಟ್ಟೆ ಹಾಕಿ ಮಕ್ಕಳಿಗೆ ಕಿರಿಕಿರಿ ಮಾಡಬಾರದು .
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡುವುದು :ಉತ್ತಮ ಡಯೆಟ್ ಪುಡ್ ಆನಾರೋಗ್ಯದ ವಿರುದ್ದ ಹೋರಾಡೋಕೆ ಇರೋ ಸೂಕ್ತ ಮೆಡಿಸಿನ್ . ವಿಟಮಿನ್ ಸಿ ಇರೋ ಹಣ್ಣುಗಳಾದ ಆರೆಂಜ್ , ಸೀಬೆಹಣ್ಣು, ಆಮ್ಲಾದಂತ ಹಣ್ಣುಗಳನ್ನು ನೀಡಬೇಕು . ಆರೋಗ್ಯಕರ ಸೂಪ್ , ಕ್ಯಾರೇಟ್ , ಸೊಪ್ಪು ಹಾಗೂ ಬಾದಾಮಿ, ವಾಲ್ ನೆಟ್ ಗಳನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀಡಿದರೆ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ . ಅಲ್ಲದೇ ಚಳಿಗಾದಲ್ಲಿ ಕೂಡ ಮಕ್ಕಳು ನೀರನ್ನು ಸೂಕ್ತ ಪ್ರಮಾಣದಲ್ಲಿ ಕುಡಿಯವಂತೆ ನೋಡಿಕೊಳ್ಳಿ.
Chanakya Niti: ಜೀವನದಲ್ಲಿ ಬೇಗ ಯಶಸ್ವಿ ಆಗಬೇಕಂದ್ರೆ ಚಾಣಕ್ಯ ಹೇಳಿದ ಈ ಮಾತುಗಳನ್ನು ಅನುಸರಿಸಿ.!
ಸ್ವಚ್ಚತೆಯನ್ನು ಕಾಪಾಡಬೇಕು : ಬೇರೆ ಬೇರೆ ವೈರಸ್ ಗಳು ಹೆಚ್ಚಾಗಿ ಚಳಿಗಾದಲ್ಲೆ ಹಬ್ಬುವುದರಿಂದ ಮಕ್ಕಳು ಏನೇ ತಿನ್ನುವುದರ ಮೊದಲು ಕೈ ತೊಳೆದುಕೊಂಡು ತಿನ್ನುವ ಹಾಗೆ ನೋಡಿಕೊಳ್ಳಿ .
ಮಕ್ಕಳು ಅನಗತ್ಯವಾಗಿ ಹೊರಗಡೆ ಸುತ್ತಾಡೋದನ್ನು ತಡಿಯಿರಿ : ಇನ್ ಡೋರ್ ಆಕ್ಟಿವಿಟಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ . ಹಾಗಂತ ಮನೆಯಲ್ಲಿ ಕೂಡಿ ಹಾಕದೇ, ಪ್ರೆಶ್ ಗಾಳಿ ಹಾಗೂ ಸೂರ್ಯನ ಬೆಳಕಿನಲ್ಲಿ ಕೂಡ ಸೂಕ್ತ ಬಟ್ಟೆ ಧರಿಸಿ ಮಕ್ಕಳಿಗೆ ಆಟವಾಡೋಕೆ ಅವಕಾಶ ಮಾಡಿಕೊಡಬಾರದು . ಯಾವುದೇ ಅತಿಯಾಗಬಾರದು ಅಷ್ಟೇ.
ಜನದಟ್ಟಣೆ ಇರೋ ಪ್ರದೇಶಗಳಲ್ಲಿ ನಾನಾ ರೀತಿ ಜ್ವರದ ವೈರಸ್ ಹಬ್ಬುವುದರಿಂದ ಅನಗತ್ಯ ತಿರುಗಾಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ನಿಲ್ಲಿಸಿ .
ಮಕ್ಕಳ ಚರ್ಮಕ್ಕೆ ಸೂಕ್ತವಾದ moisturizing ಸೋಪ್ , ಕ್ರೀಮ್ ಗಳನ್ನು ಹಚ್ಚಿ . ಮಕ್ಕಳ ಚರ್ಮ ಸೂಕ್ಚ್ಮವಾಗಿದ್ದು , ಚಳಿಗಾಲಕ್ಕೆ ಯಾವ ಸ್ಕೀನ್ ಕೇರ್ ಮಾಡಿದ್ರೆ ಸೂಕ್ತ ಎಂದು ವೈದ್ಯರ ಬಳಿ ಸಲಹೆ ಪಡೆದು ಬಳಕೆ ಮಾಡಿದರೆ ಉತ್ತಮ . ವ್ಯಾಕ್ಸಿನೇಷನ್ ಮಿಸ್ ಮಾಡಬೇಡಿ : ಮಕ್ಕಳಿಗೆ ಕೊಡೊ ವಾಕ್ಸಿನೇಷನ್ ನ ಸರಿಯಾದ ಸಮಯಕ್ಕೆ ನೀಡಿ . ಮಕ್ಕಳಲ್ಲಿ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಇದ್ದರೆ ಸೂಕ್ತ ಮೆಡಿಷಿನ್ ಅನ್ನು ಇಟ್ಟುಕೊಳ್ಳಿ .ಇವೆಲ್ಲದರ ನಡುವೆ ಮಕ್ಕಳಿಗೆ ತೀರ ಜ್ವರ ಹಾಗೂ ಉಸಿರಾಟ ಸಮಸ್ಯೆ ಬಂದರೆ ಕೂಡಲೇ ಮಕ್ಕಳ ತಜ್ಞರನ್ನ ಭೇಟಿ ನೀಡಿ. ಚಳಿಗಾಲ ಅಂದ್ರೆ ಮಕ್ಕಳಿಗೆ ಖಾಯಿಲೆ ಬಂದೇ ಬಿಡುತ್ತದೆ ಎಂದು ಅಂದುಕೊಳ್ಳುವ ಬದಲು ಪೋಷಕರು ತಮ್ಮ ಹುಷಾರಿನಲ್ಲಿ ಇದ್ದರೆ ಉತ್ತಮ