ಪಾಟ್ನಾ:- ರಾತ್ರಿಯ ಕತ್ತಲಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಬಂದ ಪ್ರೇಮಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
ಕದ್ದು ಮುಚ್ಚಿ ಪ್ರೇಯಸಿಯನ್ನು ನೋಡಲು ಬಂದಾತನಿಗೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಮದುವೆಯನ್ನೇ ಮಾಡಿಸಿದ್ದಾರೆ.
ಈ ಮದುವೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣವು ಜಮುಯಿ ಜಿಲ್ಲೆಯ ಚರ್ಕಪಥರ್ ಪೊಲೀಸ್ ಠಾಣೆ ವ್ಯಾಪ್ತಿಯ ಪನನ್ಮಾ ಗ್ರಾಮದ್ದಾಗಿದ್ದು, ರಾತ್ರಿಯ ಕತ್ತಲೆಯಲ್ಲಿ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಶನ್ಪುರ ಗ್ರಾಮದ 24 ವರ್ಷದ ಮನೋರಂಜನ್ ಕುಮಾರ್ ತನ್ನ 19 ವರ್ಷದ ಗೆಳತಿ ರಂಜು ಕುಮಾರಿ ಮನೆಗೆ ತಲುಪಿದ್ದ. ಈ ವಿವಾರ ಗ್ರಾಮಸ್ಥೈರಿಗೂ ತಿಳಿದು ಬಂದಿದ್ದು, ಇಬ್ಬರೂ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಮನೆಯ ಅಂಗಳದಲ್ಲಿ ಅವರ ಮನೆಯವರ ಸಮ್ಮುಖದಲ್ಲಿ ಈ ಜೋಡಿಗೆ ಮದುವೆ ಮಾಡಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಖೈರಾದ ಬಿಶನ್ಪುರ ನಿವಾಸಿ ಮನೋರಂಜನ್ ತನ್ನ ಗೆಳತಿ ರಂಜು ಅವರನ್ನು ಭೇಟಿಯಾಗಲು ಗ್ರಾಮಕ್ಕೆ ಬಂದಿದ್ದರು.ಗ್ರಾಮಕ್ಕೆ ಬಂದ ನಂತರ ಮನೋರಂಜನ್ ರಾತ್ರಿ ಕತ್ತಲೆಯಲ್ಲಿ ತನ್ನ ಗೆಳತಿಯೊಂದಿಗೆ ಒಬ್ಬಂಟಿಯಾಗಿ ಭೇಟಿಯಾಗುತ್ತಿದ್ದ ವಿಷಯ ಗ್ರಾಮಸ್ಥರಿಗೆ ತಿಳಿಯಿತು. ಈ ವೇಳೆ ಗ್ರಾಮಸ್ಥರು ಗಲಾಟೆ ಮಾಡಿ ಇಬ್ಬರನ್ನೂ ಹಿಡಿದಿದ್ದಾರೆ. ಗ್ರಾಮಸ್ಥರು ಪ್ರಿಯಕರನನ್ನು ತಮ್ಮ ವಶಕ್ಕೆ ಪಡೆದು ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ನಂತರ ಪ್ರೇಮಿಯ ಕುಟುಂಬಸ್ಥರನ್ನು ಸ್ಥಳಕ್ಕೆ ಆಗಮಿಸಿದ್ದಾರೆ.
ನಂತರ ತಡರಾತ್ರಿ ಗ್ರಾಮಸ್ಥರು ತೀರ್ಮಾನ ಕೈಗೊಂಡು ಪಂಡಿತರನ್ನು ಕರೆಸಿ ಮನೆಯ ಅಂಗಳದಲ್ಲಿ ಹಿಂದೂ ಪದ್ಧತಿಯಂತೆ ಇಬ್ಬರಿಗೂ ಮದುವೆ ಮಾಡಿದರು. ರಂಜು ಎಂದರೆ ಇಷ್ಟ ಎಂದು ಪ್ರೇಮಿ ಮನೋರಂಜನ್ ಕುಮಾರ್ ಹೇಳಿದ್ದಾರೆ. ಅವರಿಬ್ಬರ ಆಸೆಯಂತೆ ಮದುವೆಯೂ ಆಯಿತು. ಈ ಮದುವೆಯಿಂದ ನನಗೆ, ನನ್ನ ಇಡೀ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಯಾವುದೇ ತೊಂದರೆ ಇಲ್ಲ. ಯಾರ ಒತ್ತಡಕ್ಕೆ ಮಣಿದು ಮದುವೆ ಮಾಡಿಲ್ಲ ಇಬ್ಬರ ಆಸೆಯಂತೆ ಮದುವೆ ಆಗಿದ್ದೇವೆ ಎಂದು ಗೆಳತಿ ರಂಜು ಕುಮಾರಿಯೂ ಹೇಳಿದ್ದಾರೆ.