ಚಿತ್ರದುರ್ಗ: ಅಕ್ರಮವಾಗಿ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನೂ ಜಪ್ತಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ. 21ಕ್ಕೂ ಹೆಚ್ಚು ಜಾನುವಾರು ಸಾಗಿಸುತ್ತಿದ್ದ ವಾಹನ ಜಪ್ತಿಯಾಗಿದ್ದು, ದಾವಣಗೆರೆ ಕಡೆಯದಿಂದ ಬೆಂಗಳೂರಿನ ಕಡೆ ಹೊರಟಿದ್ದ ವಾಹನವಾಗಿದೆ.
ಹಸುಗೂಸು ಮಕ್ಕಳ ಮಾರಾಟ ಕೇಸ್: ತರಕಾರಿ ಮಾರುತ್ತಿದ್ದವಳು ಕೋಟ್ಯಾಧಿಪತಿಯಾಗಿದ್ದೇ ರೋಚಕ!
ಚಾಲಕ ಇದಾಯತ್ ಸೇರಿ 3ಜನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಖಚಿತ ಮಾಹಿತಿ ಮೇರೆಗೆ ವಾಹನ ತಡೆದು ಜಾನುವಾರು ಸಮೇತ ವಶಕ್ಕೆ ಪಡೆಯಲಾಗಿದೆ. ಇನ್ನೂ ಈ ಘಟನೆ ಸಂಭಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.