ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗಿಳಿಯಲಿವೆ. ಈವರೆಗೂ ವಂದೇ ಭಾರತ್ ನಲ್ಲಿ ಕುಳಿತು ಕೊಳ್ಳುವ, 360 ಡಿಗ್ರಿ ತಿರುಗುವಾಸನಗಳಿದ್ದವು. ಆದರೆ ಇನ್ಮುಂದೆ ದೂರದ ಪ್ರಯಾಣಕ್ಕೆ ಸಹಕಾರಿಯಾಗುವ ಹಾಗೆ ಸ್ಲೀಪರ್ ಕೋಚ್ಗಳೂ ಸಹ ಇರಲಿದೆ. ಈ ಕೋಚ್ಗಳು ಬೆಂಗಳೂರಿನ ಬಿಇಎಂಎಲ್ನಲ್ಲಿ ತಯಾರಾಗುತ್ತಿವೆ. ರೈಲ್ವೆ ಖಾತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಹಾಯಕ ಖಾತೆ ಸಚಿವ ವಿ ಸೋಮಣ್ಣ ಅವರು ಹೊಸ ಕೋಚ್ಗಳ ಪರಿಶೀಲನೆ ನಡೆಸಿದರು.
ಈ ರೈಲಿನಲ್ಲಿ ವಿಶಾಲವಾದ ಸ್ಥಳಾವಾಕಾಶ ಹೊಂದಿರಲಿರುವ ಸ್ಲೀಪರ್ ಕೋಚ್ಗಳಲ್ಲಿಅರಾಮದಾಯಕ ಸೀಟ್ಗಳು ಇರಲಿವೆ. ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳಲ್ಲಿ 16 ಬೋಗಿಗಳು, 823 ಸೀಟುಗಳು ಇರಲಿವೆ. 3ಎಸಿ ದರ್ಜೆಯ 11 ಬೋಗಿ (611 ಆಸನ), 2ಎಸಿ ದರ್ಜೆಯ 4 ಬೋಗಿ (188 ಆಸನ), ಒಂದು 1 ಎಸಿ ದರ್ಜೆಯ ಕೋಚ್ (24 ಆಸನ) ಇರಲಿವೆ.ಇನ್ನು ಈ ರೈಲಿನಲ್ಲಿ ಅರಾಮದಾಯಕ ಸೀಟ್, ಅಂಗವಿಕಲರಿಗಾಗಿ ವಿಶೇಷ ಶೌಚಾಲಯ ಮತ್ತು ಮಕ್ಕಳಿಗೆ ಡೈಪರ್ ಹಾಕಲು ಟೇಬಲ್ ವ್ಯವಸ್ಥೆ ಇದೆ. ಅಪಘಾತ ನಿಯಂತ್ರಕ ಕವಚ ವ್ಯವಸ್ಥೆ, ಗಂಟೆಗೆ 160 ಕಿ.ಮೀ. ವೇಗದಲ್ಲಿ ರೈಲು ಸಂಚಾರ ಮಾಡಲಿದೆ.
ಗಮನಿಸಿ.. ನೀವು ಲೈಂಗಿಕ ಕ್ರಿಯೆಯ ವೇಳೆ ಇಂತಹ ತಪ್ಪುಗಳನ್ನು ಮಾಡಲೇಬೇಡಿ!
ರಾಜಧಾನಿ ರೈಲುಗಳ ದರಕ್ಕೆ ಹತ್ತಿರದಲ್ಲೇ ಇದರ ಟಿಕೆಟ್ ದರ ಇರಲಿದೆ. ಎಸಿ, ಆಮ್ಲಜನಕದ ಸೂಕ್ತ ಸಂಚಾರಕ್ಕೆ ಅನುಕೂಲ ವಿಶ್ವದರ್ಜೆಯ ರೈಲು ಪ್ರಯಾಣ ಅನುಭವ ಕೊಡುತ್ತವೆ. ಮೊಬೈಲ್ ಹೋಲ್ಡರ್, ಚಾರ್ಜ್ ಪಾಯಿಂಟ್, ಸ್ನ್ಯಾಕ್ ಟೇಬಲ್, ಕೋಚ್ ಗಳಲ್ಲಿ ಮುಂದಿನ ಸ್ಟೇಷನ್ ಗಳ ಸಂಪೂರ್ಣ ಡಿಜಿಟಲ್ ಬೋರ್ಡ್ ಗಳ ಮೂಲಕ ಮಾಹಿತಿ. ಜಿಎಫ್ಆರ್ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್, ನೈಟ್ ರಿಡೀಂಗ್ ಲೈಟ್ ಗಳು, ಯುಎಸ್ಬಿ, ಸಿ ಟೈಪ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ.
ಪ್ರತಿ ಬೋಗಿಯಲ್ಲೂ ಎರಡು ಸಿಸಿ ಕ್ಯಾಮರಾಗಳ ವ್ಯವಸ್ಥೆ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ, ಟಾಕ್ ಬ್ಯಾಕ್ ವ್ಯವಸ್ಥೆ, ರಾತ್ರಿ ವೇಳೆ ಪ್ರಯಾಣಿಕರು ಗಲಾಟೆ ಮಾಡಿದ್ರೆ ಅದನ್ನು ಕಂಟ್ರೋಲ್ ಮಾಡಲು ಕೋಚ್ ಗಳಲ್ಲಿ ಸ್ಪೀಕರ್ ಗಳ ವ್ಯವಸ್ಥೆ ಹೀಗೆ ಸಾಕಷ್ಟು ಹೊಚ್ಚ ಹೊಸ ತಂತ್ರಜ್ಞಾನವನ್ನು ಬಳಸಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಬೋಗಿ ನಿರ್ಮಾಣ ಮಾಡಲು ನಾಲ್ಕು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಾಡಿ ತಿಳಿಸಿದರು.