ಧಾರವಾಡ : ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ ಹೈಡ್ರಾಮ ನಡೆಸಿರುವ ಘಟನೆ ಧಾರವಾಡ ನಗರದ ಕುಮಾರೇಶ್ವರ ನಗರದ ಬಳಿ ನಡೆದಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯಾಚರಣೆ ; ಕಳ್ಳತನ ಮಾಡಿದ್ದ ಮೂವರ ಬಂಧನ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮೂಲದ ಯುವಕ ವಿಜಯ್ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದರು. ಇವತ್ತು ಧಾರವಾಡ ಜಿಲ್ಲೆಗೆ ಜೈಲಿಗೆ ಬಿಡಲು ಬಂದಿದ್ದರು. ಆದರೆ ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ವಿಜಯ್ ಹೊಸ ಬಸ್ ಬಸ್ ನಿಲ್ದಾಣ ಬಿಲ್ಡಿಂಗ್ ಮೆಲೆ ನಿಂತು ಸಾಯೋದಾಗಿ ಬೆದರಿಕೆ ಹಾಕಿದ್ದಾನೆ. ಪೋಲಿಸರು ನನಗೆ ಚಿತ್ರಹಿಂಸೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ವಿಜಯ್ ನ್ಯಾಯಾಧೀಶರು ಬಂದರೆ ಮಾತ್ರ ಕೆಳಗೆ ಇಳಿಯೋದಾಗಿ ಹೇಳಿದ್ಧಾನೆ. ಕೂಡಲೇ ಅಲ್ಲಿದ್ದ ಮಾಧ್ಯಮದವರು ಪ್ಲಾನ್ ಮಾಡಿ ಆತ ಕೆಳಗಿಳಿಯುವಂತೆ ಮಾಡಿದ್ದಾರೆ.ಅಲ್ಲೇ ಕೋಟ್ ಹಾಕಿಕೊಂಡಿದ್ದ ಉಪನ್ಯಾಸಕರನ್ನು ಕರೆತಂದು ಇವರೇ ನ್ಯಾಯಾಧೀಶರು ಎಂದು ಅವನ ಮುಂದೆ ತೋರಿಸಿದ್ದಾರೆ. ಅವರನ್ನೇ ನ್ಯಾಯಾಧೀಶ ಎಂದು ತಿಳಿದ ಬಳಿಕ ವಿಜಯ್ ಕೆಳಗಿಳಿದಿದ್ದು, ಆಗ ಸಾರ್ವಜನಿಕರು ಅತನನ್ನ ಹಿಡಿದಿದ್ದಾರೆ.