ಗದಗ:-ಸ್ವೀಟ್ ಅಂಗಡಿಯಲ್ಲಿ ಕಳ್ಳ ತನ್ನ ಕೈ ಚಳಕ ತೋರಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ಮಿಶ್ರ ಪೇಡಾ ಸ್ವೀಟ್ ಅಂಗಡಿಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿದ್ದಾನೆ. ಬುಧವಾರ ಬೆಳಗಿನ ಜಾವ ಮೇಲ್ಚಾವಣಿ ಮೂಲಕ ಅಂಗಡಿಗೆ ನುಗ್ಗಿದ್ದ ಕಳ್ಳ, ಕೃತ್ಯ ಎಸಗಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ಎರೆಡೆರೆಡು ಬಾರಿ ಅಂಗಡಿಗೆ ನುಗ್ಗಿ ಹಣಕ್ಕಾಗಿ ಕಿಲಾಡಿ ಕಳ್ಳ ಜಾಲಾಡಿದ್ದಾನೆ. ಅಂಗಡಿಯಲ್ಲಿ 7000 ರೂ ನಗದು ಎಗರಿಸಿಕೊಂಡು ಪರಾರಿ ಆಗಿದ್ದಾನೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಳ್ಳನಿಗಾಗಿ ಪೋಲಿಸ ರ ಹುಡುಕಾಟ ನಡೆದಿದೆ.