ನವದೆಹಲಿ:- ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿಗೆ ಓಟು ಹಾಕುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ’ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲವೆಂಬ ಸಂತೋಷ್ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 140 ಕೋಟಿ ಜನರನ್ನು ಒಗ್ಗೂಡಿಸುವ ಮಂದಿರ ಅದು. ಇದೊಂದು ರಾಷ್ಟ್ರೀಯ ಮಂದಿರ ಎಂದು ಹೇಳಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತ ಮೂರು ವರ್ಗಕ್ಕೆ ನ್ಯಾಯ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿಗೆ ಓಟು ಹಾಕುತ್ತಾರೆ ಎಂದಿದ್ದಾರೆ.
ಇದೊಂದು ಐತಿಹಾಸಿಕ ಬಿಜೆಪಿ ಅಧಿವೇಶನ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಭಾಷಣ ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದೆ. 10 ವರ್ಷದಲ್ಲಿ ಸಂಘಟನೆ ಅಭಿವೃದ್ಧಿ, ಬಿಜೆಪಿ ಗೆಲುವು, ಕೇಂದ್ರ ಸರ್ಕಾರದ ಕೆಲಸಗಳು ಅವರ ಭಾಷಣಗಳಲ್ಲಿ ಇತ್ತು. ಈ ಬಾರಿ ಕರ್ನಾಟಕ 28ಕ್ಕೆ 28 ಸ್ಥಾನ ಗೆಲ್ಲಲು ನಮಗೆ ಸ್ಪೂತಿ ಕೊಟ್ಟಿದೆ ಎಂದು ಹೇಳಿದ್ದಾರೆ.