ದೊಡ್ಡಬಳ್ಳಾಪುರ:- ಇಲ್ಲಿನ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಕಳ್ಳರು ಕರಾಮತ್ತು ತೋರಿದ್ದಾರೆ. ಒಂದೆಡೆ ಹತ್ತು ದಿನಗಳ ರಾಸುಗಳ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ರೈತರು ಬಂದಿದ್ದಾರೆ.
ಮತ್ತೊಂದೆಡೆ ಜನಜಂಗುಳಿಯಲ್ಲಿ ದುಡ್ಡು ಹೆಗರಿಸುವುದನ್ನು ಕಳ್ಳರು ಕಸುಬು ಮಾಡಿಕೊಂಡಿದ್ದಾರೆ. ಹೌದು, ರೈತನೋರ್ವನಿಂದ ಎಂಟು ಸಾವಿರ ಹಣ ಕದ್ದು ಪರಾರಿ ಯಾಗಲು
3 ಜನ ಕಳ್ಳರು ಯತ್ನಿಸಿದ್ದಾರೆ. ಕೂಡಲೇ ರೈತನ ಚಿರಟಾದಿಂದ ಎಚೆತ್ತಾ ಅಲ್ಲಿನ ಸ್ಥಳೀಯ ಜನ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ.
ಇದರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದು ಇನ್ನಿಬ್ಬರು ಪರಾರಿ ಆಗಿದ್ದಾರೆ. ಜಾತ್ರೆಗೆ ಬಂದಿದ್ದ ರೈತರಿಂದ ಸಿಕ್ಕಿಬಿದ್ದ ಓರ್ವ ಕಳ್ಳನಿಗೆ ಸಾರ್ವಜನಿಕರು ಹಿಗ್ಗಮುಗ್ಗ ಥಳಿಸಿದ್ದಾರೆ.
ಸಿಕ್ಕಿಬಿದ್ದಾ ಕಳ್ಳ ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರ ಅತಿಥಿ ಆಗಿದ್ದಾನೆ.