ಆತ ಖತರ್ನಾಕ್ ಕಳ್ಳ..ಮಾಡ್ತಾ ಇದ್ದಿದ್ದು ಕಳ್ಳತನವಾದ್ರು ಬಾಲಿವುಡ್ ನಟಿ ಜೊತೆಗೆ ಲಿಂಕ್ ಇಟ್ಟುಕೊಂಡಿದ್ದ..ಮದುವೆಯಾಗಿದ್ರು ಗರ್ಲ್ ಫ್ರೆಂಡ್ಸ್ ಶೋಕಿ ಇಟ್ಕೊಂಡಿದ್ದ..ತಾನಿದ್ದಿದ್ದು 400 ಚದರ ಅಡಿಯಲ್ಲಿರೊ ಮನೆ ಆದ್ರು ಪ್ರಿಯತಮೆಗೆ ಮೂರು ಕೋಟಿ ಬಂಗಲೆ ಗಿಫ್ಟ್ ಕೊಟ್ಟದ್ದ.150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದವನು..ಈಗ ಪೊಲೀಸ್ ರ ಅತಿಥಿ ಆಗಿದಾನೆ..
ಈ ಫೋಟೊದಲ್ಲಿರೊ ಆಸಾಮಿಯ ಹೆಸರು ಪಂಚಾಕ್ಷರಿ ಸಂಗಯ್ಯ ಸ್ವಾಮಿ..ಮಹರಾಷ್ಟ್ರದ ಸೊಲ್ಲಾಪುರದವ್ನು..ತಂದೆ ರೈಲ್ವೆ ನೌಕರರಾಗಿದ್ದ..ತಂದೆ ಸಾವಿನ ಬಳಿಕ ತಾಯಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಆದ್ರೆ ಹಣದಾಸೆಗೆ ಅಪ್ರಾಪ್ತನಾಗಿರುವಾಗಲೆ ಮನೆಗಳ್ಳತನಕ್ಕೆ ಇಳಿದವನು..ದೇಶದ ಬೇರೆ ಬೇರೆ ರಾಜ್ಯಗಳಲ್ಲು ಕೈ ಚಳಕ ತೋರಿ ಪೊಲೀಸರ ಅತಿಥಿಯಾಗಿದ್ದ.ಖತರ್ನಾಕ್ ಕಳ್ಳ .ಬಾಲಿವುಡ್ ನಟಿ ಜೊತೆಗೆ ಸಂಪರ್ಕದಲ್ಲಿದ್ದನಂತೆ.
ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?
ಹೌದು..2003 ರಲ್ಲಿ ಅಪ್ರಾಪ್ತನಾಗಿದ್ದಾಲೇ ಕಳ್ಳತನಕ್ಕೆ ಇಳಿದಿದ್ದ ಪಂಚಾಕ್ಷರಿ ಸಂಗಯ್ಯ ಸ್ವಾಮಿ 2009 ರಲ್ಲಿ ಪ್ರೊಫೆಷನಲ್ ಕಳ್ಳನಾಗಿ ಬದಲಾಗಿದ್ದ..ಬಾಗಿಲು ಹಾಕಿದ್ದ ಮನೆಯನ್ನ ಗುರ್ತಿಸುತ್ತಿದ್ದ ಆಸಾಮಿ ತನ್ನ ಸಹಚರರ ಜೊತೆ ಫೀಲ್ಡಿಗೆ ಇಳಿತಿದ್ದ..ಕಳ್ಳತನ ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ರಸ್ತೆಯಲ್ಲಿಯೇ ಬಟ್ಟೆ ಬದಲಿಸಿಕೊಳ್ತಿದ್ದ..ಈತ ಕದ್ದ ಚಿನ್ನಾಭರಣವನ್ನು ಫೈರ್ ಗನ್ ಹಾಗೂ ಮೂಸ್ ಬಳಸಿ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡ್ತಿದ್ದ..
ಇನ್ನೂ ಕದ್ದ ಹಣದಲ್ಲಿ ಶೋಕಿ ಜೀವನ ಮಾಡ್ತಿದ್ದ ಈತನಿಗೆ 2014-15 ರಲ್ಲಿ ಪ್ರಖ್ಯಾತ ನಟಿ ಜೊತೆಗೆ ಲಿಂಕ್ ಇತ್ತು ಎಂದು ಪೊಲೀಸರ ತನಿಖೆ ವೇಳೆ ಹೇಳಿಕೊಂಡಿದ್ದಾನೆ.. ಅಲ್ಲದೇ ಆಕೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾನಂತೆ..ಇನ್ನೂ ಮದುವೆಯಾಗಿ ಮಗು ಇದ್ರು ಗರ್ಲ್ ಫ್ರೆಂಡ್ ಹೊಂದಿದ್ದ ಆರೋಪಿ ಪಂಚಾಕ್ಷರಿ ಸಂಗಯ್ಯ ಸ್ವಾಮಿ ಪ್ರಿಯತಮೆಗೆ 2016 ರಲ್ಲಿ 3 ಕೋಟಿ ಮೌಲ್ಯದ ಬಂಗಲೆಯನ್ನ ಕೊಲ್ಕತ್ತದಲ್ಲಿ ಒಲವಿನ ಉಡುಗೊರೆಯಾಗಿ ಕೊಟ್ಟಿದ್ದ..ಅಷ್ಟೇ ಅಲ್ಲ ಆಕೆಯ ಬರ್ತ್ ಡೇ ಗೆ 22 ಲಕ್ಷದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದ..ಇದಾದ ಬಳಿಕ ಆತನ ನಸೀಬು ಕೆಟ್ಟಿತ್ತು 2016 ರ ಅಂತ್ಯದ ವೇಳೆಗೆ ಗುಜರಾತ್ ಪೊಲೀಸರು ಕಳ್ಳತನ ಕೇಸ್ ನಲ್ಲಿ ಬಂಧಿಸಿ ಜೈಲಿಗಟ್ಟಿದ್ರು
6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಆರೋಪಿ..ಹೊರಬಂದು ಮತ್ತೆ ಕಳ್ಳತನ ಚಾಳಿ ಮುಂದುವರೆಸಿದ್ದು ಮಹಾರಾಷ್ಟ್ರ ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದ್ರು..ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಿದ್ದ ಈತ 2024 ಜನವರಿ 9 ರಂದು ಮಡಿವಾಳದ ಮಾರುತಿನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿದ್ದ..ಆತನ ಪತ್ತೆಗೆ ಬಲೆ ಬೀಸಿದ್ದ ಮಡಿವಾಳ ಪೊಲೀಸರು ಪಂಚಾಕ್ಷರಿ ಸಂಗಯ್ಯ ಸ್ವಾಮಿ ಬಂಧಿಸಿದ್ದು ಬಂಧಿತನಿಂದ 12.25 ಲಕ್ಷ ಮೌಲ್ಯದ 181 ಗ್ರಾಂ ಚಿನ್ನದ ಗಟ್ಟಿ 333 ಗ್ರಾಂ ಬೆಳ್ಳಿ ವಸ್ತುಗಳು..ಸೇರಿ ಫೈರ್ ಗನ್ ಹಾಗೂ ಮೂಸ್ ವಶಕ್ಕೆ ಪಡೆದುಕೊಂಡಿದ್ದಾರೆ..
ವಿಪರ್ಯಾಸ ಅಂದ್ರೆ ಗರ್ಲ್ ಫ್ರೆಂಡ್ ಗೆ ಕೋಟಿ ಕೋಟಿ ಮೌಲ್ಯದ ಮನೆ ಗಿಫ್ಟ್ ನೀಡ್ತಿದ್ದ ಆಸಾಮಿ ತಾನಿದ್ದಿದ್ದು ಮಾತ್ರ ತಾಯಿ ಹೆಸರಲ್ಲಿರುವ 400 ಸ್ಕ್ವೇರ್ ಫೀಟ್ ಮನೆಯಲ್ಲಿ..ಆ ಮನೆ ಮೇಲಿರುವ ಲೋನ್ ಕಟ್ಟದೆ ಬ್ಯಾಂಕ್ ನಿಂದ ನೋಟಿಸ್ ಬಂದಿದ್ದು..ಹರಾಜಿಗೆ ಬಂದಿದೆ..ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸ್ವಾಮಿ ಕಳ್ಳತನ ಹಾದಿ ಹಿಡಿದಿದ್ದು ಕುಖ್ಯಾತ ಕಳ್ಳನಾಗಿದ್ದು ಮಾತ್ರ ಇಂಟರಸ್ಟಿಂಗ್..ಸದ್ಯ ಆರೋಪಿ ಬಂಧಿಸಿ ಮಡಿವಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಮತ್ಯಾವ ಇಂಟರಸ್ಟಿಂಗ್ ಸಂಗತಿ ಹೊರಬರುತ್ತೊ ಕಾದು ನೋಡಬೇಕಾಗಿದೆ..