ಬೆಂಗಳೂರು: ರಾಜಕಾಲುವೆ ಒತ್ತುವರಿ ವಿಚಾರವಾಗಿ ಆರಂಭದಲ್ಲಿ ಪಾಲಿಕೆ ಶೂರತ್ವ ತೋರಿತ್ತು.ದೊಡ್ಡವರ ಹೆಸರು ಕೇಳಿಬಂದ ತಕ್ಷಣ ಇಡೀ ಕಾರ್ಯಾಚರಣೆ ನಿಲ್ಲಸಿಬಿಟ್ಟಿತ್ತು.ದೊಡ್ಡವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯವೇ ಅಂತ ಜನ ಪ್ರಶ್ನೆ ಮಾಡಿದರು.ಆದ್ರೆ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಇದೀಗ ಮತ್ತೆ ಬಿಬಿಎಂಪಿ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದ್ದು, ಒತ್ತುವರಿದಾರರಿಗೆ ನಡುಕ ಹುಟ್ಟಿಸಿದೆ.
ಮಳೆ ಬಂದಾಗ ಬೆಂಗಳೂರಿನಲ್ಲಿ ಆಗೋ ಅನಾಹುತ ಅಷ್ಟಿಷ್ಟಲ್ಲ.ಪ್ರತಿ ಮಳೆಗಾಲದಲ್ಲೂ ಮಳೆರಾಯ ಅವಾಂತರಗಳನ್ನೇ ಸೃಷ್ಟಿ ಮಾಡ್ತಾನೆ..ಈ ಅನಾಹುತಗಳಿಗೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ.ಆದ್ರೆ ಸಾಕಷ್ಟು ಅನಾಹುತ ನಡೆದ ಬಳಿಕ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ನಾಟಕವಾಡ್ತಿದೆ. ಬಡವರ ಮನೆ ಡೆಮಾಲೀಷನ್ ಮಾಡಿ ಶ್ರೀಮಂತರ ಮನೆ ಹೊಡೆಯದೆ ಸೈಲೆಂಟ್ ಆಗ್ತದೆ. ಆದ್ರೆ ಈ ಬಾರಿ ನಗರದಲ್ಲಿ ಕಾನೂನುಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡ ಮಾಲೀಕರಿಗೆ ಮರ್ಮಾಘಾತ ನೀಡಲು ಪ್ಲಾನ್ ರೂಪಿಸಿದೆ.
ಹೌದು.ಭೂಗಳ್ಳರು ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಭರ್ಜರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ಹಾಗೂ ರಾಜಕಾಲುವೆ ಮೇಲೆ ಒತ್ತುವರಿ ಮಾಡಿಕೊಂಡು ಐಷಾರಾಮಿ ಮನೆ ಕಟ್ಟಿದವರಿಗೆ ಬಿಸಿ ಮುಟ್ಟಿಟ್ಟಿಸೋಕೆ ಮುಂದಾಗಿದೆ. ಹೀಗಾಗಿ , ಅಕ್ರಮವಾಗಿ ಕಟ್ಟಡ ನಿರ್ಮಿಸಿದವರಿಗೆ ನಡುಕ ಶುರುವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಬಳಿಕ ಬಿಬಿಎಂಪಿ ಒತ್ತುವರಿ ಕಾರ್ಯ ಅಷ್ಟಕ್ಕೇ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡವರ ಮನೆಗಳಿಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜೆಸಿಬಿ ನುಗ್ಗಿಸೋಕೆ ಮುಂದಾಗಿವೆ. ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಕಾರ್ಯಾಚರಣೆಗೆ ಮುಂದಾಗ್ತಾ ಇದ್ದಂತೆ ಅಕ್ರಮವಾಗಿ ರಾಜಕಾಲುವೆ ಮೇಲೆ ಮನೆ ಹಾಗೂ ಅಪಾರ್ಟ್ಮೆಂಟ್ ಕಂಪನಿಗಳು ನಿರ್ಮಿಸಿದವರಿಗೆ ನಿರ್ಮಿಸಿದವರಿಗೆ ಢವಢವ ಶುರುವಾಗಿದೆ.
ಪ್ರತಿ ಬಾರಿಯೂ ನಗರದಲ್ಲಿ ಮಳೆ ಬಂದಂತಹ ಸಂದರ್ಭದಲ್ಲಿ ಸಾಕಷ್ಟು ಅವಗಢಗಳು ಸಂಭವಿಸುತ್ತಿವೆ. ಈ ಅವಘಡಕ್ಕೆ ರಾಜುಕಾಲುವೆ ಒತ್ತುವರಿಯಾಗಿರುವುದರಿಂದ ಮಳೆ ನೀರು ಮನೆಗಳಿಗೆ ನಗ್ಗುತ್ತಾ ಇವೆ.ಅವಾಂತರ ಸೃಷ್ಟಿಯಾಗುತ್ತಿದ್ದೂ, ಇದು ಆಯಾ ಕಾಲದ ಸರ್ಕಾರಕ್ಕೆ ಮುಜುಗರಕ್ಕೆ ಇಡು ಮಾಡುತ್ತಿದೆ.ಹೀಗಾಗಿನೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಈ ಬಾರಿ ಮಳೆ ಬಾರದ ಕಾರಣ ಯಾವುದೇ ಅವಾಗಢ ಸಂಭವಿಸಿಲ್ಲ, ಹೀಗಾಗಿ ಮುಂದೆ ನಡೆಯುವ ಅವಗಢವನ್ನು ತಪ್ಪಿಸಿಕೊಳ್ಳಲ್ಲೂ ಎಲ್ಲೆಲ್ಲಿ ರಾಜ ಕಾಲುವೆ ಒತ್ತುವರಿಯಾಗಿದೆಯೋ ಎಲ್ಲವೂ ಕೂಡ ತೆರವುಗೊಳಿಸಬೇಕು ಎಂದು ಬಿಬಿಎಂಪಿಗೆ ಖಡಕ್ ಆದೇಶ ನೀಡಿದ್ದಾರೆ ಎನ್ನಲಾಗಿದೆ.ಹೀಗಾಗಿ ಎಚ್ಚೆತ್ತುಕೊಂಡಿರೋ ಪಾಲಿಕೆ ರಾಜಕಾಲುವೆ ಒತ್ತುವರಿ ತೆರವಿಗೆ ವೇಗ ನೀಡಲು ಮುಂದಾಗಿದೆ
ಹಾಗೇನೇ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಜಂಟಿಯಲ್ಲಿ ಕಾರ್ಯಾಚರಣೆ ಮಾಡೋಕೆ ಮುಂದಾಗಿದ್ದು, ರಾಜಕಾಲುವೆ ಮೇಲೆ ಅಕ್ರಮವಾಗಿ ತಲೆಯೆತ್ತಿರುವ ವಿಲ್ಲಾಗಳು ಹಾಗೂ ಮನೆಗಳಿಗೆ ಈಗಾಗಲೇ ಮಹದೇವಪುರ ವಲಯ ಹಾಗೂ ಬೊಮ್ಮನಹಳ್ಳಿ ವಲಯ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದ್ದು, ಈಗಾಗಲೇ ರೈನ್ ಬೊ ಡ್ರೈವ್ ಲೇಔಟ್ 13 ವಿಲ್ಲಾ ಗಳಿಗೆ ನೋಟಿಸ್ ನೀಡಲಾಗಿದೆ. ಇಂತಹ ಒತ್ತುವರಿವಿಲ್ಲಗಳಿಂದಲೇ ಅಪಾರ್ಟ್ಮೆಂಟ್ ಗಳಿಗೆ ಪ್ರತಿ ಬಾರಿಯೂ ಕೂಡ ನೀರು ನುಗ್ಗಿ ಸಮಸ್ಯೆ ಆಗ್ತಿದೆ. ಹೀಗಾಗಿ ಒತ್ತುವರಿ ಕೊಳಗಳಿಗೆ ನೋಟಿಸ್ ನೀಡೋಕೆ ಮುಂದಾಗಿದ್ದು, ತಹಸಿಲ್ದಾರ್ ನೋಟಿಸ್ ಬೆನ್ನಲ್ಲೇ ಮತ್ತಷ್ಟು ಒತ್ತುವರಿ ಕೊಳಗಳಿಗೆ ಟೆನ್ಶನ್ ಶುರುವಾಗಿದೆ.
ಒತ್ತುವರಿದಾರರ ಮಾಹಿತಿ
ರಾಜಕಾಲುವೆ ಒತ್ತುವರಿ- 3,176
ಈವರೆಗೆ ಒತ್ತುವರಿ ತೆರವು – 2,322
ತೆರವು ಬಾಕಿ – 854
ನ್ಯಾಯಾಲಯದಲ್ಲಿರುವ ಕೇಸ್ – 155
ಒತ್ತುವರಿ ತೆರವಿಗೆ ಆದೇಶ ಹೊರಡಿಸುವ ಹಂತದಲ್ಲಿರುವ ಪ್ರಕರಣ – 487
ತಹಶೀಲ್ದಾರರಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ ಪ್ರಕರಣ – 162
ಇಷ್ಟು ದಿನ ರಾಜಕಾಲುವೆ ಒತ್ತುವರಿಯಾಗಿದ್ದ ವಿಲ್ಲಾಗಳ ತೆರವು ಕಾರ್ಯಾಚರಣೆಗೆ ಬ್ರೇಕ್ ಹಾಕಿದ್ದ ಬಿಬಿಎಂಪಿ ಇದೀಗ ಮತ್ತೆ ಎಚ್ಚೆತ್ತುಕೊಂಡಿದ್ದು, ರಾಜ ಕಾಲುವೆ ಮೇಲೆ ಅಕ್ರಮವಾಗಿ ವಿಲ್ಲಾಗಳನ್ನು ನಿರ್ಮಿಸಿಕೊಂಡಿರುವವರ ಮನೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಯಾವಾಗ ಬುಲ್ಡೋಜರ್ ನಗ್ಗಿಸುತ್ತೆ ಎಂದು ಕಾದುನೋಡಬೇಕಾಗಿದೆ.