ತಂಡದ ಬ್ಯಾಟ್ಸ್ʼಮನ್ʼಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 184 ರನ್ಗಳಿಂದ ಸೋಲು ಕಂಡಿದೆ. ಈ ಸೋಲಿಗೆ ಯಾರು ಹೊಣೆ ಎಂಬ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಮಾತನಾಡಿದ್ದು,
ಪಂದ್ಯ ಸೋತಾಗ ಹೆಚ್ಚು ನೋವಾಗುತ್ತದೆ. ತಂಡದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ನಮಗೆ ಪಂದ್ಯವನ್ನು ಗೆಲ್ಲುವ ಅವಕಾಶವಿತ್ತು. ಕೊನೆಯ ಪಕ್ಷ ನಾವು ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದಿತ್ತು. ನಾವು ಪ್ರಯತ್ನಿಸಿದೆವಾದರೂ ಅದು ಸಾಧ್ಯವಾಗಲಿಲ್ಲ. ಇತ್ತ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿತ್ತು ರನ್ ಗಳಿಸಿದವರು ಇನ್ನೂ ಹೆಚ್ಚು ಸಮಯ ಆಡಬಹುದಿತ್ತು. ಆದರೆ ಅವರು ಕೂಡ ವಿಕೆಟ್ ಕೈಚೆಲ್ಲಿದರು. ಆದರೆ ಅವರು ಇನ್ನು ಹೊಸಬರು, ಅವರಿನ್ನು ಕಲಿಯುತ್ತಿದ್ದಾರೆ ಎಂದಿದ್ದಾರೆ.
ಹೂವು ಬೆಳೆದು ಹಣ ಗಳಿಸಿ: ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!
ಇನ್ನು ಸೋಲಿನ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ‘ಸೋತಿರುವುದು ತುಂಬಾ ನಿರಾಸೆ ತಂದಿದೆ. ನಾವು ಕೊನೆಯವರೆಗೂ ಹೋರಾಡಲು ಬಯಸಿದ್ದೆವು ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಸೆಷನ್ ಅಷ್ಟೇ ಅಲ್ಲ, ಇಡೀ ಪಂದ್ಯದಲ್ಲಿ ಎಲ್ಲಿ ತಪ್ಪು ನಡೆದಿದೆ ಎಂಬುದನ್ನು ನೋಡಬೇಕಿದೆ. ಇಡೀ ಟೆಸ್ಟ್ ಪಂದ್ಯದಲ್ಲಿ ನಮಗೆ ಅವಕಾಶವಿತ್ತು. ಆದರೆ ನಾವು ಆಸ್ಟ್ರೇಲಿಯ ತಂಡಕ್ಕೆ ಹಲವು ಅವಕಾಶಗಳನ್ನು ನೀಡಿದ್ದೇವೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ಗೆ 90 ರನ್ ಕಲೆಹಾಕಿತ್ತು. ಆದರೆ ಅಲ್ಲಿಂದ ನಾವು ಎಚ್ಚರ ತಪ್ಪಿದೆವು ಎಂದಿದ್ದಾರೆ.