ಕಲಬುರ್ಗಿ:- ಆತ ಡ್ರೈವರ್… ಹೀಗೆ ಟೀ, ಕಾಫಿ ಕುಡಿಯಲೆಂದೋ ಕಿರಾಣಿ ಅಂಗಡಿ ಹತ್ತಿರ ಹೋಗಿದ್ದಾನೆ. ಇದೇ ವೇಳೆ ಡೀಸೆಲ್ ಟ್ಯಾಂಕರ್ ಸೈಡ್ ಗೆ ಹಾಕಿ ಹೆೋಗಿದ್ದಾನೆ. ಆತ ಇಳಿಯುತ್ತಿದ್ದಂತೆ ಚಾಲಕನನ್ನೇ ಟ್ಯಾಂಕರ್ ಫಾಲೋ ಮಾಡಿದೆ. ಆಮೇಲೆ ನಡೆದ ಅವಾಂತರ ತಿಳಿಯಲು ಸ್ಟೋರಿ ಓದಿ.
ಹೌದು, ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಡಿಸೆಲ್ ಟ್ಯಾಂಕರ್ ಅಂಗಡಿಯೊಂದಕ್ಕೆ ನುಗ್ಗಿದೆ. ಟ್ಯಾಂಕರ್ನ ಹ್ಯಾಂಡ್ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಾಲಕ ಕಿರಾಣಿ ಅಂಗಡಿಗೆ ಹೋಗಿದ್ದ.
ಈ ವೇಳೆ ಡ್ರೈವರ್ ಹಿಂದೆಯೇ ಡೀಸೆಲ್ ಟ್ಯಾಂಕರ್ ಕಿರಾಣ ಅಂಗಡಿಗೆ ನುಗ್ಗಿದೆ. ವಿಜಪ್ಪಗೌಡ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕಿರಾಣ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.