ಮೈಸೂರು:- ನನ್ನ, ಬಿಎಸ್ವೈ ನಡುವಿನ ಟಾಕ್ವಾರ್ ರಾಜಕೀಯವಾದದ್ದು ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ, ಯಡಿಯೂರಪ್ಪ ನಡುವೆ ಬಿರುಕು ಉಂಟು ಮಾಡಲು ಯತ್ನಿಸುತ್ತಿದ್ದಾರೆ. ನನ್ನ, ಬಿಎಸ್ವೈ ನಡುವಿನ ಟಾಕ್ವಾರ್ ರಾಜಕೀಯವಾದದ್ದು, ಬಿಜೆಪಿ, ಜೆಡಿಎಸ್ನವರು ಉತ್ತಮವಾದ ಆಡಳಿತ ನೀಡಿದ್ದೇವೆ. ಆದರೆ, ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದರು.
ಇನ್ನು ನನ್ನ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದ್ದೇವೆ. ಸಿದ್ದರಾಮಯ್ಯಗೆ ಕಲ್ಲುಬಂಡೆಯಾಗಿ ನಿಂತಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಈ ಹಿಂದೆ ನನಗೂ ಇದೇ ರೀತಿ ಡಿಕೆಶಿ ಹೇಳಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ನವರು 9ನೇ ಸ್ಥಾನವನ್ನು ಹೇಗೆ ಗೆದ್ದಿದ್ದಾರೆ ಗೊತ್ತಿದೆ. ಅದಕ್ಕೆ ನಾನು 8 ಸ್ಥಾನ ಎಂದು ಹೇಳುತ್ತೇನೆ. ನನ್ನ ಕಂಡರೆ ಹೊಟ್ಟೆಉರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒಳ್ಳೆಯ ಆಡಳಿತ ನೀಡಿದರೆ ನಮಗೆ ಯಾಕೆ ಹೊಟ್ಟೆಉರಿ. ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಲ್ಲ, ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಅದನ್ನು ತಿಳಿದುಕೊಳ್ಳಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.