ಜೀವನದಲ್ಲಿ ಹಣ ಸಂಪಾದನೆ ಮಾಡುವುದು ಬಹಳ ಕಷ್ಟದ ವಿಚಾರ. ಅದಕ್ಕಾಗಿ ಬಹಳ ವರ್ಷಗಳ ಕಾಲ ದುಡಿಯಬೇಕಾಗುತ್ತದೆ. ದುಡಿದ ನಂತರ ಉಳಿಸುವುದು ಸಹ ಇನ್ನೂ ಬಹಳ ಮುಖ್ಯವಾದ ಕೆಲಸ ಎನ್ನಬಹುದು. ಹಣವಿಲ್ಲದೇ ಜೀವನ ಮಾಡುವುದು ಬಹಳ ಕಷ್ಟದ ವಿಚಾರ. ದುಡ್ಡು ನಮ್ಮ ಜೀವನದ ಬಹಳ ಮುಖ್ಯವಾದ ಭಾಗವಾಗಿದೆ. ಇನ್ನು ಕೆಲವರು ಜೀವನದಲ್ಲಿ ಬಹಳಷ್ಟು ದುಡಿದರೂ ಸಹ ಅದನ್ನ ಉಳಿಸಲು ಬಹಳ ಪರದಾಡಬೇಕಾಗುತ್ತದೆ.
ಅದರಂತೆ 500 ರೂಪಾಯಿಗಳನ್ನು ತೆಗೆಯಲೆಂದು ಸೈಬರ್ ಕೆಫೆಗೆ ಹೋಗಿ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿದಾಗ 87 ಕೋಟಿ ರೂ. ಇರುವುದನ್ನು ನೋಡಿ ಬಾಲಕ ಶಾಕ್ ಆಗಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಇಷ್ಟು ಬ್ಯಾಲೆನ್ಸ್ ನೋಡಿ ಸೈಬರ್ ಕೆಫೆ ಮಾಲೀಕರು ಹಾಗೂ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಇದಾದ ನಂತರ ಸೈಫ್ ಅಲಿ ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದ್ದಾನೆ. 9ನೇ ತರಗತಿಯ ವಿದ್ಯಾರ್ಥಿ ಸೈಫ್ಗೆ ಈ ಘಟನೆ ಅರ್ಥವಾಗದೇ ಇದ್ದಾಗ ಆತನ ತಾಯಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಈ ವಿಷಯ ತಿಳಿಸಿದ್ದಾಳೆ.
Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.!?
ಬ್ಯಾಂಕ್ ಸ್ಟೇಟ್ಮೆಂಟ್ಗಾಗಿ ಸೈಫ್ ಸಿಎಸ್ಪಿ (ಕಸ್ಟಮರ್ ಸರ್ವಿಸ್ ಪಾಯಿಂಟ್) ಗೆ ಹೋದಾಗ, ಖಾತೆಯಿಂದ 87 ಕೋಟಿ 65 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಮತ್ತು ಖಾತೆಯಲ್ಲಿ ಕೇವಲ 532 ರೂ. ಈ ಬಗ್ಗೆ ಸೈಫ್ ಬ್ಯಾಂಕ್ ಗೆ ತೆರಳಿ ಮಾಹಿತಿ ನೀಡಿದಾಗ 5 ಗಂಟೆಯೊಳಗೆ ಖಾತೆಯಿಂದ 87 ಕೋಟಿ 65 ಲಕ್ಷ ರೂ.ಗಳನ್ನು ತೆಗೆದು ಹಾಕಿರುವುದು ದೃಢಪಟ್ಟಿದೆ.
ಸೈಫ್ ಅವರ ಕುಟುಂಬವು ಈ ವಿಷಯದಲ್ಲಿ ಯಾವುದೇ ಅಧಿಕೃತ ದೂರು ನೀಡಿಲ್ಲ. ಆದರೆ ಹಣವನ್ನು ಯಾರು ಕಳುಹಿಸಿದ್ದಾರೆ ಮತ್ತು ಎಲ್ಲಿಂದ ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ. ನಾರ್ತ್ ಬಿಹಾರ ಗ್ರಾಮೀಣ ಬ್ಯಾಂಕ್ ವಿದ್ಯಾರ್ಥಿಯೊಬ್ಬನ ಖಾತೆಗೆ ಇಷ್ಟೊಂದು ಮೊತ್ತ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ಕೆಲವೇ ಗಂಟೆಗಳಲ್ಲಿ ಈ ಮೊತ್ತ ಹಿಂಪಡೆದಿದ್ದು, ಆತನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಸೈಬರ್ ವಂಚನೆ ಮೂಲಕ ದೊಡ್ಡ ಮೊತ್ತದ ಹಣ ತಪ್ಪಿ ಇನ್ನೊಬ್ಬರ ಖಾತೆಗೆ ವರ್ಗಾವಣೆಗೊಂಡಿರುವ ಸಾಧ್ಯತೆಗಳಿವೆ.