ಛತ್ತೀಸ್ಗಢ:- ಶಾಲೆಗೆ ಚಕ್ಕರ್ ಹಾಕಿ ಟ್ರ್ಯಾಕ್ಟರ್ ಸವಾರಿ ಮಾಡಲು ಹೋದ ವಿದ್ಯಾರ್ಥಿಗಳು ಸಾವಿಗೀಡಾದ ಘಟನೆ ಛತ್ತೀಸ್ಗಢದ ಧಮತರಿ ಜಿಲ್ಲೆಯಲ್ಲಿ ಜರುಗಿದೆ.
ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ: ನೈಟ್ ಬೀಟ್ ಪೊಲೀಸರು ಮಾಡ್ತಿರೋದು ಏನು?
ಛತ್ತೀಸ್ಗಢದ ಧಮತರಿ ಜಿಲ್ಲೆಯಲ್ಲಿ ಶಾಲೆ ಬಿಟ್ಟು ಟ್ರ್ಯಾಕ್ಟರ್ ಏರಿ ಹೊರಟಾಗ ಅದು ಪಲ್ಟಿಯಾಗಿ ಮೂವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ.
ಮೃತರನ್ನು ಮೋಗ್ರಾ ಗ್ರಾಮದ ನಿವಾಸಿಗಳಾದ ಪ್ರೀತಮ್ ಚಂದ್ರಕರ್ (16), ಮಾಯಾಂಕ್ ಧ್ರುವ್ (16) ಮತ್ತು ಚರ್ರಾದ ಹೊನೇಂದ್ರ ಸಾಹು (14) ಎಂದು ಗುರುತಿಸಲಾಗಿದೆ . ಗಾಯಗೊಂಡ ಬಾಲಕ ಅರ್ಜುನ್ ಯಾದವ್ ಬನಗರ ಮೂಲದವನು ಎಂದು ಅವರು ಹೇಳಿದರು.
ಚಂದ್ರಕರ್ ತನ್ನ ಟ್ರ್ಯಾಕ್ಟರ್ ಹೊರತೆಗೆದಾಗ ನಾಲ್ವರೂ ಶಾಲೆಯನ್ನು ಬಿಟ್ಟು ಅದರ ಮೇಲೆ ಸವಾರಿ ಮಾಡಲು ಕುರುಡ್ಗೆ ಹೋದರು ಎಂದು ಅವರು ಹೇಳಿದರು. ಹಿಂತಿರುಗುವಾಗ, ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಚಂದ್ರಕರ್, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಚಾರ್ರಾದ ಕೃಷಿ ಕಾಲೇಜು ಬಳಿ ಪಲ್ಟಿ ಹೊಡೆದರು ಈ ವೇಳೆ ಅವಘಡ ಸಂಭವಿಸಿದೆ.